ಚುನಾವಣಾ ಬಾಂಡ್‌ಗಳಿಂದ ಬಿಜೆಪಿಯ ಖಜಾನೆ ಭರ್ತಿ: ಮಲ್ಲಿಕಾರ್ಜುನ ಖರ್ಗೆ ಆರೋಪ

Sampriya

ಗುರುವಾರ, 21 ಮಾರ್ಚ್ 2024 (12:47 IST)
Photo Courtesy X
ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಬಾಂಡ್‌ಗಳ ವಿಷಯದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಚುನಾವಣಾ ಬಾಂಡ್‌ಗಳಿಂದ ಬಿಜೆಪಿಯ ಖಜಾನೆ ತುಂಬಿದ. ಆದರೆ ನಮ್ಮ ಪಕ್ಷದ ಬ್ಯಾಂಕ್‌ ಖಾತೆಯನ್ನು ಫ್ರೀಜ್ ಮಾಡಲಾಗಿದೆ. ವಿರೋಧ ಪಕ್ಷಗಳ ಬ್ಯಾಂಕ್‌ ಖಾತೆಯನ್ನು ಗುರಿಯಾಗಿಸಲಾಗಿದೆ. ನಮ್ಮ ಪಕ್ಷಕ್ಕೆ ಶೇ11ರಷ್ಟು ಹಣ ಸಂಗ್ರಹವಾಗಿದೆ. ಆದರೆ ಚುನಾವಣಾ ಬಾಂಡ್‌ಗಳಿಂದ ಬಿಜೆಪಿಗೆ ಶೇ56ರಷ್ಟು ಹಣ ಸಂಗ್ರಹವಾಗಿದೆ ಎಂದರು.

ಪ್ರಜಾಪ್ರಭುತ್ವಕ್ಕೆ ನ್ಯಾಯಸಮ್ಮತ ಚುನಾವಣೆ ಅಗತ್ಯವಾಗಿದ್ದು, ಹೀಗಾದರೆ ನಡೆಯಲು ಸಾಧ್ಯನೇ ಎಂದು ಪ್ರಶ್ನಿಸಿದರು. ಆಡಳಿತದ ಅಧಿಕಾರದಲ್ಲಿರುವವರು ಸಂಪನ್ಮೂಲಗಳ ಮೇಲೆ ಏಕಸ್ವಾಮ್ಯವನ್ನು ಹೊಂದಿರಬಾರದು, ಸರ್ಕಾರ ಮಾಧ್ಯಮದ ಮೇಲೂ ಏಕಸ್ವಾಮ್ಯವನ್ನು ಹೊಂದಿರಬಾರದು, ಇಡಿ, ಚುನಾವಣಾ ಆಯೋಗ, ಐಟಿಯಂತಹ ಸಾಂವಿಧಾನಿಕ ಮತ್ತು ನ್ಯಾಯಾಂಗ ಸಂಸ್ಥೆಗಳ ಮೇಲೆ ಆಡಳಿತ ಪಕ್ಷವು ನೇರ ಅಥವಾ ಪರೋಕ್ಷ ನಿಯಂತ್ರಣವನ್ನು ಹೊಂದಿರಬಾರದು ಎಂದು ಕೇಂದ್ರದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ