ಕೊನೆಗೂ ಭಾರತೀಯರ ಪ್ರತಿಭಟನೆಗೆ ಬೆಚ್ಚಿದ ಸ್ನ್ಯಾಪ್ ಚಾಟ್

ಮಂಗಳವಾರ, 18 ಏಪ್ರಿಲ್ 2017 (05:24 IST)
ನವದೆಹಲಿ: ಭಾರತ ಒಂದು ಬಡರಾಷ್ಟ್ರ ಎಂದು ಸ್ನ್ಯಾಪ್ ಚಾಟ್ ಸಿಇಒ ಇವಾನ್ ಸ್ಪಿಗಲ್ ಹೇಳಿದ್ದರೆಂದು ಮಾಜಿ ನೌಕರರೊಬ್ಬರು ಆರೋಪಿಸಿದ ಹಿನ್ನಲೆಯಲ್ಲಿ ದೇಶಾದ್ಯಂತ ಚಾಟ್ ಆಪ್ ವಿರುದ್ಧ ನಡೆದ ಬಹಿಷ್ಕಾರ ಚಳವಳಿಗೆ ಸಂಸ್ಥೆ ಕೊನೆಗೂ ಎಚ್ಚೆತ್ತುಕೊಂಡಿದೆ.

 
ಮಾಜಿ ನೌಕರನ ಆರೋಪ ಸುಳ್ಳೆಂದಿರುವ ಸ್ನ್ಯಾಪ್ ಚಾಟ್ ವಕ್ತಾರರು, ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳನ್ನು ಗೌರವಿಸುವುದಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಭಾರತೀಯ ಬಳಕೆದಾರರ ಮೇಲೆ ತುಂಬಾ ಗೌರವವಿರುವುದಾಗಿ ಸಂಸ್ಥೆಯ ವಕ್ತಾರರು ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಈ ಮೊದಲು ಸ್ನ್ಯಾಪ್ ಚಾಟ್ ಆಪ್ ಸಂಸ್ಥೆಯ ಸಿಇಒ ಭಾರತದಂತಹ ಬಡರಾಷ್ಟ್ರಗಳಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಿಸುವ ಆಸಕ್ತಿಯಿಲ್ಲ ಎಂದಿದ್ದಾರೆಂದು ಹೇಳಲಾಗಿತ್ತು. ಅದರಿಂದಾಗಿ ದೇಶಾದ್ಯಂತ ಸ್ನ್ಯಾಪ್ ಚಾಟ್ ಆಪ್ ಬಹಿಷ್ಕಾರ ಆಂದೋಲನ ಶುರುವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ