ಕೇಂದ್ರ ಮುಂಗಡಪತ್ರದ ಬಗ್ಗೆ ನಿಮ್ಮ ಅಭಿಪ್ರಾಯ, ಮಂಡನೆಯಲ್ಲಿದ್ದ ಲೋಪದೋಷ, ನಿಮ್ಮ ನಿರೀಕ್ಷೆ,ಬಜೆಟ್ ಬಗ್ಗೆ ನಿಮ್ಮಲ್ಲಿರುವ ಪ್ರಶ್ನೆಗಳು, ಒಟ್ಟಾರೆ ಬಜೆಟ್‌ಗೆ ಸಂಬಂಧಿಸಿದಂತೆ ಯಾವುದೇ ಅಭಿಪ್ರಾಯ ಮತ್ತು ಪ್ರಶ್ನೆಗಳನ್ನು ನೀವು ಹಣಕಾಸು ಸಚಿವರಲ್ಲಿ ಕೇಳಬಹುದು.
ಹೌದು, ನಿಮ್ಮೆಲ್ಲ ಸವಾಲುಗಳನ್ನು ಜೇಟ್ಲಿ ಅವರಿಗೆ ಟ್ವೀಟ್ ಮಾಡಿದರೆ, ಇಂದು ಸಂಜೆ 6 ಗಂಟೆಗೆ ನಿಮಗವರು ಉತ್ತರಿಸಲಿದ್ದಾರೆ. ವಿಡಿಯೋ ಮೂಲಕ ಜೇಟ್ಲಿ ದೇಶದ ನಾಗರಿಕರಿಗೆ ಈ ಸಂದೇಶವನ್ನು ರವಾನಿಸಿದ್ದಾರೆ.