ಮನೆಯೊಂದರಲ್ಲಿ ಅಜ್ಜಿ ಸೇರಿ ಐವರ ಮೃತದೇಹ ಪತ್ತೆ
ನವದೆಹಲಿ: ಅಜ್ಜಿ ಹಾಗೂ ಆಕೆಯ ಮೂವರು ಹೆಣ್ಣುಮಕ್ಕಳು ಸೇರಿದಂತೆ ಐವರ ಶವ ದೆಹಲಿಯ ಮನೆಯೊಂದರಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಯಾವುದೇ ವಸ್ತುಗಳು ಕಳುವಾಗಿಲ್ಲ. ಆದರೆ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ತನಿಖೆಯಿಂದ ಹೊರಬರಬೇಕು. ಯಾರೂ ಸಹ ಮನೆಯ ಒಳಗೆ ಪ್ರವೇಶ ಮಾಡಿಲ್ಲ ಎಂದು ತಿಳಿದುಬಂದಿದೆ.