ದಿಸ್ಪುರ್ : 12 ವರ್ಷಗಳ ಹಿಂದಿನ ಪ್ರಕರಣದಲ್ಲಿ ಐವರು ನಕ್ಸಲರನ್ನು ದೋಷಿಗಳೆಂದು ಗುವಾಹಟಿಯ ಎನ್ಐಎ ವಿಶೇಷ ಕೋರ್ಟ್ ಬುಧವಾರ ತೀರ್ಪು ಪ್ರಕಟಿಸಿದೆ.
ಮಣಿಪುರದ ದಿಲೀಪ್ ಸಿಂಗ್, ಅಸ್ಸಾಂನ ಸೆಂಜಮ್ ಧೀರೇನ್ ಸಿಂಗ್, ಅರ್ನಾಲ್ಡ್ ಸಿಂಗ್, ಪಶ್ಚಿಮ ಬಂಗಾಳದ ಇಂದ್ರನೀಲ್ ಚಂದಾ ಮತ್ತು ಅಮಿತ್ ಬಾಗ್ಚಿ ಶಿಕ್ಷೆಗೊಳಗಾದ ಅಪರಾಧಿಗಳು.
ಪೀಪಲ್ಸ್ ಲಿಬರೇಶನ್ ಆರ್ಮಿ ನಕ್ಸಲ್ ಸಂಘಟನೆ ಸಂಬಂಧದ ಪ್ರಕರಣದಲ್ಲಿ ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಕ್ರಿಮಿನಲ್ ಪಿತೂರಿಯಲ್ಲಿ ತೊಡಗಿದ್ದರು ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಐಪಿಸಿ ಸೆಕ್ಷನ್ 121 ಎ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ 1967 ರ ಸೆಕ್ಷನ್ 18, 18 ಎ ಮತ್ತು 39 ರ ಆರೋಪದಡಿಯಲ್ಲಿ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯ ಶಿಕ್ಷೆಯನ್ನು ಘೋಷಿಸಿದೆ.