ಮೂರು ತಿಂಗಳಲ್ಲಿ ಮೂರನೇ ಬಾರಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆ

sampriya

ಶನಿವಾರ, 1 ಜೂನ್ 2024 (19:26 IST)
Photo By X
ನವದೆಹಲಿ: ಜೂನ್‌ 1ರಿಂದ ದೇಶದಾದ್ಯಂತ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆ ಕಂಡಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕಿಲೋಗ್ರಾಂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ₹ 69.50 ಇಳಿಕೆಯನ್ನು ಘೋಷಿಸಿವೆ.

ಪರಿಷ್ಕೃತ ದರ ತಕ್ಷಣದಿಂದ ಜಾರಿಗೆ ಬರಲಿದೆ. ಇಂದಿನಿಂದ ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ₹ 1,676ಕ್ಕೆ ಸಿಗಲಿದೆ.   

ಮೇ 1 ರಂದು, ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ₹ 19 ಇಳಿಸಿತ್ತು. ಅಂದರೆ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಆಗ ದೆಹಲಿಯಲ್ಲಿ 1745.50 ಸಿಗುತ್ತಿತ್ತು.

ಅಲ್ಲದೆ, ಏಪ್ರಿಲ್‌ನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್‌ಗೆ ₹ 30.50 ಕಡಿತಗೊಳಿಸಿತ್ತು. ಈ ತಿಂಗಳ ಆರಂಭದಲ್ಲಿ ಅದನ್ನು ಸರಿ ಹೊಂದಿಸಲು ಮತ್ತೆ ಇಳಿಕೆ ಮಾಡಿದೆ.

ಬೆಲೆ ಇಳಿಕೆಗೆ ನಿಖರವಾದ ಕಾರಣಗಳನ್ನು ಬಹಿರಂಗಪಡಿಸದಿದ್ದರೂ, ಅಂತರರಾಷ್ಟ್ರೀಯ ತೈಲ ಬೆಲೆಗಳಲ್ಲಿನ ಏರಿಳಿತಗಳು, ತೆರಿಗೆ ನೀತಿಗಳಲ್ಲಿನ ಬದಲಾವಣೆಗಳು ಮತ್ತು ಪೂರೈಕೆ-ಬೇಡಿಕೆಯಂತಹ ಅಂಶಗಳಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ