ವಿದೇಶಿ ನಿಧಿ : ಕರ್ನಾಟಕಕ್ಕೆ 2ನೇ ಸ್ಥಾನ

ಭಾನುವಾರ, 19 ಮಾರ್ಚ್ 2023 (08:31 IST)
ನವದೆಹಲಿ : ಕಳೆದ 5 ವರ್ಷಗಳಲ್ಲಿ ರಾಷ್ಟ್ರಾದ್ಯಂತ ಇರುವ ಸರ್ಕಾರೇತರ ಸಂಸ್ಥೆಗಳಿಗೆ ಒಟ್ಟು 88,882 ಕೋಟಿ ರೂ. ವಿದೇಶದಿಂದ ದೇಣಿಗೆ ಹರಿದು ಬಂದಿದೆ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. ಅದರಲ್ಲೂ ಕಳೆದ ವರ್ಷ ಅತಿ ಹೆಚ್ಚು ವಿದೇಶಿ ದೇಣಿಗೆಯನ್ನು ಪಡೆಯುವ ಎರಡನೇ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ.

2018 ರಿಂದ 2022ರ ನಡುವೆ ಈ ದೇಣಿಗೆ ಬಂದಿದ್ದು, ಈ ಸಮಯದಲ್ಲಿ ಎನ್ಜಿಓಗಳು ವಿದೇಶಿ ದೇಣಿಗೆ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಅನೇಕ ಎನ್ಜಿಓಗಳ ಮೇಲೆ ದಾಳಿಗಳು ನಡೆದಿದ್ದವು. ಆಗ ಪತ್ತೆಯಾದ ಅಕ್ರಮಗಳನ್ವಯ ಹಲವಾರು ಎನ್ಜಿಓಗಳ ಪರವಾನಗಿಯನ್ನು ರದ್ದುಪಡಿಸಿತ್ತು. ಆದರೂ ವರ್ಷದಿಂದ ವರ್ಷಕ್ಕೆ ವಿದೇಶಿ ದೇಣಿಗೆಯ ಪ್ರಮಾಣ ಏರಿಕೆಯಾಗುತ್ತಲೇ ಇದೆ.

ಈ ಬಗ್ಗೆ ಗೃಹ ಸಚಿವಾಲಯವು ಮಾಹಿತಿ ನೀಡಿದ್ದು, 2018ಯಿಂದ 2022ರ ನಡುವೆ ವಿದೇಶಿ ಕೊಡುಗೆಗಳ ಕಾಯ್ದೆಯಡಿಯಲ್ಲಿ ಒಟ್ಟು 1,827 ಎನ್ಜಿಒಗಳು ನೋಂದಣಿಯನ್ನು ರದ್ದುಗೊಳಿಸಿದ್ದರೂ ಸಹ ರಾಷ್ಟ್ರವ್ಯಾಪಿ ಎನ್ಜಿಒಗಳಿಗೆ ವಿದೇಶಿ ನಿಧಿಯು 2019-20ರಲ್ಲಿ 16,306 ಕೋಟಿ ರೂ., 2020-21ರಲ್ಲಿ 17,059 ಕೋಟಿ ರೂ., 2021-22ರಲ್ಲಿ 22,085ರೂ.ಗೆ ಏರಿದೆ ಎಂದು ಬಹಿರಂಗಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ