1993ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಹತ್ಯೆಯಾಗಿ, 713 ಜನರಿಗೆ ಗಾಯಗಳಾಗಿದ್ದವು. ಒಟ್ಟು 27 ಕೋಟಿ ರೂಪಾಯಿ ಆಸ್ತಿ ನಷ್ಟವಾದ ಪ್ರಕರಣದಲ್ಲಿ ಪ್ರಮುಖ ರೂವಾರಿಯಾಗಿರುವ ಗ್ಯಾಂಗ್‌ಸ್ಟರ್ ದಾವೂದ್ ಸೆರೆಗೆ ಪೊಲೀಸರು ದಶಕಗಳಿಂದ ಯೋಜನೆಗಳನ್ನು ರೂಪಿಸಿದ್ದರು.
ದಾವೂದ್ ಇಬ್ರಾಹಿಂ ಎಸಗಿದ ಅಪರಾಧಗಳನ್ನು ಮರೆಯಬೇಕು ಎಂದು ಹೇಳುತ್ತಿಲ್ಲ. ಆದರೆ, ದಾವೂದ್ ಭಾರತಕ್ಕೆ ಮರಳುವ ಬಗ್ಗೆ ಮರೆಯುವುದು ಸೂಕ್ತ. ಯಾಕೆಂದರೆ ದಾವೂದ್ ಐಎಸ್‌ಐ ವಶದಲ್ಲಿದ್ದಾನೆ. ಒಂದು ವೇಳೆ ದಾವೂದ್ ಭಾರತಕ್ಕೆ ಮರಳಲು ಪ್ರಯತ್ನಿಸಿದಲ್ಲಿ ಐಎಸ್‌ಐ ಅಧಿಕಾರಿಗಳು ದಾವೂದ್‌ನನ್ನು ಹತ್ಯೆ ಮಾಡುತ್ತಾರೆ ಎಂದು ಮಾಜಿ ಪೊಲೀಸ್ ಅಧಿಕಾರಿ ಎಂ.ಎನ್.ಸಿಂಗ್ ತಿಳಿಸಿದ್ದಾರೆ.