ತಿರುವನಂತಪುರಂ : ಲೈಫ್ ಮಿಷನ್ ಯೋಜನೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕಚೇರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಮ್.ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಲೈಫ್ ಮಿಷನ್ ಯೋಜನೆಗೆ ರೆಡ್ ಕ್ರೆಸೆಂಟ್ ಬಿಡುಗಡೆ ಮಾಡಿದ 18.50 ಕೋಟಿ ರೂ. ಪೈಕಿ 14.50 ಕೋಟಿ ರೂ.ಗಳನ್ನು ಬಳಸಿ 140 ಕುಟುಂಬಗಳಿಗೆ ತ್ರಿಶ್ಯೂರ್ ಜಿಲ್ಲೆಯ ವಡಕ್ಕಂಚೆರಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು.
ಉಳಿದ ಹಣವನ್ನು ಬಳಸಿ ಆರೋಗ್ಯ ಕೇಂದ್ರ ನಿರ್ಮಿಸಲು ಗುತ್ತಿಗೆ ನೀಡಲಾಗಿತ್ತು. ಈ ಗುತ್ತಿಗೆ ವಿಚಾರದಲ್ಲಿ ಶಿವಶಂಕರ್ ಅವರು ಲಂಚ ಸ್ವೀಕರಿಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಶಿವಶಂಕರ್ ಜೊತೆ ಸೇರಿಕೊಂಡು ಮತ್ತೊಬ್ಬ ಆರೋಪಿ ಸ್ವಪ್ನ ಸುರೇಶ್ 4.48 ಕೋಟಿ ರೂ.ಗಳನ್ನು ಲಂಚವಾಗಿ ಸ್ವೀಕರಿಸಿದ್ದಾರೆ ಎಂದು ಯುಎನ್ಐಟಿಎಸಿ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಈಪನ್ ತಿಳಿಸಿದ್ದಾರೆ.