ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ನಿಧನ

ಬುಧವಾರ, 1 ಫೆಬ್ರವರಿ 2023 (09:06 IST)
ನವದೆಹಲಿ : ಹಿರಿಯ ವಕೀಲ ಹಾಗೂ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ (97) ಮಂಗಳವಾರ ನಿಧನರಾಗಿದ್ದಾರೆ.

ಮಂಗಳವಾರ ಸಂಜೆ 7 ಗಂಟೆಗೆ ಅವರು ದೆಹಲಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರದಲ್ಲಿ ಶಾಂತಿ ಭೂಷಣ್ ಅವರು ಕಾನೂನು ಸಚಿವರಾಗಿ 1977ರಿಂದ 1979ರ ವರೆಗೆ ಸೇವೆ ಸಲ್ಲಿಸಿದ್ದರು.

1974ರಲ್ಲಿ ಶಾಂತಿ ಭೂಷಣ್ ಅವರು ಅಲಹಾಬಾದ್ ಹೈಕೋರ್ಟ್ನಲ್ಲಿ ಕೇಂದ್ರದ ಮಾಜಿ ಸಚಿವ ರಾಜ್ ನಾರಾಯಣ್ ಪರವಾಗಿ ವಾದಿಸಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದ್ದರು.

ಶಾಂತಿ ಭೂಷಣ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹ ಸಂತಾಪ ಸೂಚಿಸಿದ್ದಾರೆ. ಕಾನೂನು ಕ್ಷೇತ್ರಕ್ಕೆ ಶಾಂತಿ ಭೂಷಣ್ ಅವರ ಕೊಡುಗೆ ಹಾಗೂ ಸಮಾಜದಲ್ಲಿ ಹಿಂದುಳಿದವರ ಪರವಾಗಿ ದನಿ ಎತ್ತುತ್ತಿದ್ದುದು ಸ್ಮರಣೀಯವಾದುದು. ಅವರ ನಿಧನವು ತೀವ್ರ ನೋವು ತಂದಿದೆ ಎಂದು ವಿಷಾದಿಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ