ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರ ವಿರುದ್ಧ ಮಾಜಿ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯದ ಆರೋಪ
ಶನಿವಾರ, 20 ಏಪ್ರಿಲ್ 2019 (13:08 IST)
ನವದೆಹಲಿ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೊಯ್ ವಿರುದ್ಧ ಸುಪ್ರೀಂ ಕೋರ್ಟಿನ ಮಾಜಿ ಸಿಬ್ಬಂದಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
ಅಕ್ಟೋಬರ್ 11, 2018 ರಂದು ರಂಜನ್ ಗೊಗೊಯ್ ಅವರು ನನ್ನನ್ನು ಬಲವಂತವಾಗಿ ಅಪ್ಪಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ನನ್ನ ಕುಟುಂಬಕ್ಕೂ ಎಂದು ಮಹಿಳೆ ಆರೋಪಿಸಿ 22 ನ್ಯಾಯಧೀಶರಿಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಮಹಿಳೆ ಬರೆದ ಪತ್ರವನ್ನು ಸ್ಕ್ರೋಲ್, ದಿ ವೈರ್, ಕ್ಯಾರವನ್ ವೆಬ್‍ಸೈಟ್‍ಗಳು ಪ್ರಕಟಿಸಿವೆ.
ಆದರೆ ನನ್ನ ಮೇಲಿನ ಸುಳ್ಳು ಹಾಗೂ ಅಶ್ಲೀಲವಾಗಿದೆ. ನನ್ನ ಬ್ಯಾಂಕ್ ಖಾತೆಯಲ್ಲಿ 6.8 ಲಕ್ಷ ರೂ. ಇದ್ದು, 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ನನಗೆ ಸಿಕ್ಕಿದ ಪ್ರಶಸ್ತಿ ಇದು ಎಂದು ಹೇಳಿ ತನ್ನ ವಿರುದ್ಧ ಕೇಳಿ ಬಂದ ಆರೋಪವನ್ನು ರಂಜನ್ ಗೊಗೋಯ್ ಅವರು ತಳ್ಳಿ ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.