ಡೆಬಿಟ್ ಕಾರ್ಡ್ ನಿಂದ ಹಣ ಡ್ರಾ ಮಾಡಲು ಮಿತಿ ಹೇರಿದ ಎಸ್‌.ಬಿ.ಐ

ಶುಕ್ರವಾರ, 12 ಏಪ್ರಿಲ್ 2019 (10:37 IST)
ನವದೆಹಲಿ : ಡೆಬಿಟ್ ಕಾರ್ಡ್ ಬಳಕೆದಾರರು ಪ್ರತಿ ನಿತ್ಯ ಹಣ ಪಡೆದುಕೊಳ್ಳುವುದಕ್ಕೆ ಮಿತಿ ಹೇರುವುದರ ಮೂಲಕ ಇದೀಗ  ಎಸ್‌.ಬಿ.ಐ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.


ಹೌದು. . ಎಸ್‌.ಬಿ.ಐ, ಕ್ಲಾಸಿಕ್ ಡೆಬಿಟ್ ಕಾರ್ಡ್, ಗ್ಲೋಬಲ್ ಇಂಟರ್ನ್ಯಾಷನಲ್ ಡೆಬಿಟ್ ಕಾರ್ಡ್, ಗೋಲ್ಡ್ ಇಂಟರ್ನ್ಯಾಷನಲ್ ಡೆಬಿಟ್ ಕಾರ್ಡ್ ಮತ್ತು ಪ್ಲಾಟಿನಮ್ ಇಂಟರ್ನ್ಯಾಷನಲ್ ಡೆಬಿಟ್ ಕಾರ್ಡ್ ನಿಂದ ಬಳಕೆದಾರರು ಪ್ರತಿ ನಿತ್ಯ ಎಟಿಎಂ ನಿಂದ 40,000ರೂ ಗಳನ್ನು ಹಣ ಡ್ರಾ ಮಾಡಿಕೊಳ್ಳಬಹುದಾಗಿತ್ತು, ಆದರೆ ಹೊಸ ಆದೇಶ ಅನ್ವಯ 20,000 ರೂ ಗಳನ್ನು ಮಾತ್ರ ಹಣ ಡ್ರಾ ಮಾಡಿಕೊಳ್ಳಬಹುದಾಗಿದೆ.


ಇದಲ್ಲದೆ ಆನ್‌ ಲೈನ್‌ ನಲ್ಲಿ ಈ ಹಿಂದೆ 75,000 ರೂ ಹಣವನ್ನುವರ್ಗಾವಣೆ ಮಾಡಬಹುದಾಗಿತ್ತು. ಆದರೆ ಇದೀಗ ಆನ್ಲೈನ್ ​​ವ್ಯವಹಾರ ಮಿತಿ ಕೂಡ ಕಡಿತ ಮಾಡಿದ್ದು ಪ್ರತಿ ದಿವಸ 50,000ರೂ ಗಳನ್ನು ಮಾತ್ರ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಅಲ್ಲದೇ ನಿರ್ವಹಣೆ ಶುಲ್ಕದ ಹೆಸರಿನಲ್ಲಿ ಜಿಎಸ್ಟಿಯನ್ನು ಒಳಗೊಂಡತೆ 125 ರೂಗಳನ್ನು ವಾರ್ಷಿಕವಾಗಿ ಪಡೆದುಕೊಳ್ಳಲಿದ್ದು, ಬದಲಾವಣೆ ಅಥಾವ ಹೊಸ ಕಾರ್ಡ್ ಗಾಗಿ ಜಿಎಸ್ಟಿಯನ್ನು ಒಳಗೊಂಡತೆ Rs 300 ರೂ ಶುಲ್ಕವನ್ನು ಪಡೆದುಕೊಳ್ಳಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ