ವಿವಾಹಿತೆಯ ಮೇಲೆ 40 ಜನರಿಂದ ನಾಲ್ಕು ದಿನ ನಿರಂತರ ಅತ್ಯಾಚಾರ

ಶನಿವಾರ, 21 ಜುಲೈ 2018 (17:06 IST)
ಚಂಡೀಗಢ : ಹರಿಯಾಣದ ಪಂಚಕುಲ ಜಿಲ್ಲೆಯಲ ಸಮೀಪದ ಗೆಸ್ಟ್‌ ಹೌಸ್‌ನಲ್ಲಿ ನನ್ನನ್ನು  ಬಂಧಿಯಾಗಿರಿಸಿಕೊಂಡು 40 ಜನರು ನನ್ನ ಮೇಲೆ ನಾಲ್ಕು ದಿನ ನಿರಂತರವಾಗಿ  ಅತ್ಯಾಚಾರ ಎಸಗಿದ್ದಾರೆ ಎಂದು ಚಂಡೀಗಢದ 22ರ ಹರೆಯದ ವಿವಾಹಿತೆಯೊಬ್ಬಳು ದೂರು ನೀಡಿದ್ದಾಳೆ.



‘ನನ್ನ ಪತ್ನಿಗೆ ಉದ್ಯೋಗದ ಭರವಸೆ ನೀಡಿ ಆಕೆಯನ್ನು ನಮಗೆ ಗೊತ್ತಿರುವ  ವ್ಯಕ್ತಿಯೊಬ್ಬ ಗೆಸ್ಟ್‌ ಹೌಸ್‌ಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆಕೆಗೆ ಮತ್ತು ಬರುವ ವಸ್ತುವನ್ನು ತಿನ್ನಿಸಿ ನಾಲ್ಕು ದಿನಗಳ ಕಾಲ ಸೆರೆಯಾಗಿಸಿಕೊಂಡು  ಆರೋಪಿಗಳು ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ.. ನನಗೆ ಮತ್ತು ನನ್ನ ಪತ್ನಿಗೆ ಜೀವ ಬೆದರಿಕೆ ಒಡ್ಡಲಾಗಿತ್ತು' ಎಂದು ಮಹಿಳೆಯ ಪತಿ ಹೇಳಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ