ಇನ್ಮುಂದೆ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೂ ಅವಕಾಶವಿಲ್ಲ!

ಬುಧವಾರ, 21 ಡಿಸೆಂಬರ್ 2022 (09:49 IST)
ಕಾಬೂಲ್ : ಅಫ್ಘಾನಿಸ್ತಾನದ ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿನಿಯರಿಗೆ ಪ್ರವೇಶವನ್ನು ತಾಲಿಬಾನ್  ಸರ್ಕಾರ ನಿಷೇಧಿಸಿದೆ.

ಕಳೆದ ವರ್ಷ ಅಧಿಕಾರವನ್ನು ವಶಪಡಿಸಿಕೊಂಡಾಗ ಮೃದುವಾದ ಆಡಳಿತವನ್ನು ಭರವಸೆ ನೀಡಿದ್ದರೂ, ವಿದ್ಯಾರ್ಥಿನಿಯರಿಗೆ ಎಲ್ಲಾ ರೀತಿಯ ನಿರ್ಬಂಧಗಳನ್ನು ಹೆಚ್ಚಿಸಿದೆ.

ಇದೀಗ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣ ಸಚಿವ ನೇದಾ ಮೊಹಮ್ಮದ್ ನದೀಮ್ ಆದೇಶ ಪತ್ರವನ್ನು ನೀಡಿದ್ದು, ಅದರಲ್ಲಿ ಮುಂದಿನ ಸೂಚನೆ ಬರುವವರೆಗೆ ವಿದ್ಯಾರ್ಥಿನಿಯರ ಶಿಕ್ಷಣವನ್ನು ಅಮಾನತುಗೊಳಿಸಬೇಕು. ಈ ಆದೇಶ ತಕ್ಷಣವೇ ಜಾರಿಗೆ ತರಬೇಕು ಎಂದು ತಿಳಿಸಿದೆ.

ಈ ಆದೇಶಕ್ಕೆ ಅಮೆರಿಕ ಖಂಡಿಸಿದ್ದು, ಅಫ್ಘಾನಿಸ್ತಾನದಲ್ಲಿರುವ ಎಲ್ಲರ ಹಕ್ಕುಗಳನ್ನು ಗೌರವಿಸುವವರೆಗೆ ತಾಲಿಬಾನ್ ಅಂತಾರಾಷ್ಟ್ರೀಯ ಸಮುದಾಯದ ಕಾನೂನುಬದ್ಧ ಸದಸ್ಯತ್ವಕ್ಕೆ ನಿರೀಕ್ಷಿಸಲಾಗುವುದಿಲ್ಲ. ಈ ನಿರ್ಧಾರವು ತಾಲಿಬಾನ್ಗೆ ತೊಂದರೆಯನ್ನು ಉಂಟು ಮಾಡುತ್ತದೆ ಎಂದು ತಿಳಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ