ಜಿ-20 ಶೃಂಗಸಭೆ ಯಶಸ್ವಿ : ಗಾಂಧೀಜಿ ಸ್ಮಾರಕಕ್ಕೆ ವಿಶ್ವನಾಯಕರ ನಮನ

ಸೋಮವಾರ, 11 ಸೆಪ್ಟಂಬರ್ 2023 (09:45 IST)
ನವದೆಹಲಿ : ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಎರಡು ದಿನ ನಡೆದ ಜಿ-20 ಶೃಂಗಸಭೆ ಯಶಸ್ವಿಯಾಗಿ ಮುಗಿದಿದೆ. ಜಿ20 ಗುಂಪಿನ ಮುಂದಿನ ಜವಬ್ದಾರಿಯನ್ನು ಬ್ರೆಜಿಲ್ ಅಧ್ಯಕ್ಷರಿಗೆ ಭಾರತದ ಪ್ರಧಾನಿ ಮೋದಿ ಹಸ್ತಾಂತರಿಸಿದ್ದಾರೆ.
 
ಶೃಂಗಸಭೆ ಫಲಪ್ರದವಾಗಿದ್ದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಸೇರಿ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಸುಧಾರಣೆ ಆಗಬೇಕಿದೆ ಎಂದು ಮೋದಿ ಉದ್ಘರಿಸಿದ್ದಾರೆ. 51 ದೇಶಗಳೊಂದಿಗೆ ವಿಶ್ವಸಂಸ್ಥೆ ಆರಂಭವಾದ ಕ್ಷಣಕ್ಕೂ ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಕಾಲಕ್ಕೆ ತಕ್ಕಂತೆ ವಿಶ್ವಸಂಸ್ಥೆ ಬದಲಾಗಬೇಕಿದೆ ಎಂದಿದ್ದಾರೆ.

ಈ ಮೂಲಕ ವಿಶ್ವಸಂಸ್ಥೆ ಭದ್ರತಾಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ಸಿಗಬೇಕು ಎಂದು ಪರೋಕ್ಷವಾಗಿ ಮೋದಿ ಹೇಳಿದ್ದಾರೆ. ಜಿ-20ಶೃಂಗಸಭೆಯ ಭಾಗವಾಗಿ ವಿಶ್ವನಾಯಕರು ಇಂದು ರಾಜಘಾಟ್ಗೆ ತೆರಳಿ ಮಹಾತ್ಮಾ ಗಾಂಧೀಜಿ ಸ್ಮಾರಕಕ್ಕೆ ನಮನ ಸಲ್ಲಿಸಿದ್ರು.

ತುಂತುರು ಮಳೆ ನಡ್ವೆಯೂ ಪ್ರಧಾನಿ ಮೋದಿ, ಜೋ ಬೈಡನ್, ರಿಷಿ ಸುನಾಕ್ ಸೇರಿ ಜಿ-20 ನಾಯಕರು ಹೂಗುಚ್ಚ ಇರಿಸಿ ವಿಶ್ವಶಾಂತಿಗೆ ಪ್ರಾರ್ಥಿಸಿದ್ರು. ಅಮೆರಿಕಾ ಅಧ್ಯಕ್ಷರು ಇಲ್ಲಿಂದ ನೇರವಾಗಿ ವಿಯೇಟ್ನಾಂ ಪ್ರವಾಸ ಕೈಗೊಂಡರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ