ರೈಲ್ವೆ ನಿಲ್ದಾಣದಲ್ಲಿ ಗ್ಯಾಂಗ್ ರೇಪ್ !

ಮಂಗಳವಾರ, 26 ಜುಲೈ 2022 (08:52 IST)
ನವದೆಹಲಿ : 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
 
ಗುರುವಾರ ತಡರಾತ್ರಿ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ವಿದ್ಯುತ್ ನಿರ್ವಹಣಾ ಸಿಬ್ಬಂದಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ.

ಇದೀಗ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಕೊಠಡಿಯ ಹೊರಗೆ ಕಾವಲು ಕಾಯುವ ಮೂಲಕ ಕೃತ್ಯಕ್ಕೆ ಸಹಕಾರ ನೀಡಿದ ಮತ್ತಿಬ್ಬರನ್ನು ಕೂಡ ಬಂಧಿಸಲಾಗಿದೆ. 

ಆರೋಪಿಗಳನ್ನು ಸತೀಶ್ ಕುಮಾರ್ (35), ವಿನೋದ್ ಕುಮಾರ್ (38), ಮಂಗಲ್ ಚಂದ್ ಮೀನಾ (33) ಮತ್ತು ಜಗದೀಶ್ ಚಂದ್ (37) ಎಂದು ಗುರುತಿಸಲಾಗಿದೆ.

ಈ ಪ್ರಕರಣ ಸಂಬಂಧ ಎಫ್ಐಆರ್ ದಾಖಲಾದ ಎರಡು ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸಿ, ದೆಹಲಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಗಿದೆ ಮತ್ತು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಡಿಸಿಪಿ (ರೈಲ್ವೇ) ಹರೇಂದ್ರ ಸಿಂಗ್ ತಿಳಿಸಿದ್ದಾರೆ.

ಜುಲೈ 22 ರಂದು ಮುಂಜಾನೆ 3.27ರ ಸುಮಾರಿಗೆ ಘಟನೆ ಕುರಿತಂತೆ ನಮಗೆ ಮಾಹಿತಿ ದೊರೆತಿದ್ದು, ರೈಲ್ವೆ ನಿಲ್ದಾಣದ ಕೊಠಡಿಯೊಳಗೆ ಇಬ್ಬರು ವ್ಯಕ್ತಿಗಳು ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ. 

ಕಳೆದ ಒಂದು ವರ್ಷದಿಂದ ಪತಿಯಿಂದ ದೂರವಿದ್ದ ಮಹಿಳೆ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊಕದ್ದಮೆಯಲ್ಲಿ ತೊಡಗಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಸ್ನೇಹಿತನ ಮೂಲಕ ಮಹಿಳೆಗೆ ಆರೋಪಿಗಳಲ್ಲಿ ಓರ್ವನ ಪರಿಚಯವಾಗಿತ್ತು.

ತಾನು ರೈಲ್ವೇ ಉದ್ಯೋಗಿಯಾಗಿದ್ದು ಮಹಿಳೆಗೂ ಕೆಲಸ ಕೊಡಿಸುವುದಾಗಿ ಹೇಳಿದ್ದನು. ನಂತರ ಮಹಿಳೆಯೊಂದಿಗೆ ಫೋನ್ನಲ್ಲಿ ಮಾತನಾಡಲು ಪ್ರಾರಂಭಿಸಿದ ಆರೋಪಿ ಜುಲೈ 21 ರಂದು ತನ್ನ ಮಗನ ಹುಟ್ಟುಹಬ್ಬದ ಜೊತೆಗೆ ಹೊಸ ಮನೆ ಖರೀಸುತ್ತಿರುವ ಪ್ರಯುಕ್ತ ಔತಣಕೂಟಕ್ಕೆ ಮಹಿಳೆಯನ್ನು ಮನೆಗೆ ಆಹ್ವಾನಿಸಿದ್ದನು.

ನಂತರ ಮಹಿಳೆಯನ್ನು ಕೀರ್ತಿ ನಗರ ಮೆಟ್ರೋ ನಿಲ್ದಾಣದಿಂದ ರಾತ್ರಿ 10.30ರ ಸುಮಾರಿಗೆ ಕರೆದುಕೊಂಡು ರೈಲ್ವೇ ನಿಲ್ದಾಣಕ್ಕೆ ಹೋದನು. ಬಳಿಕ ಕೊಠಡಿಯೊಂದರಲ್ಲಿ ಕುಳಿತುಕೊಳ್ಳಲು ತಿಳಿಸಿ ಹೊರಗೆ ಹೋಗಿದ್ದ ಆರೋಪಿ, ನಂತರ ತನ್ನ ಸ್ನೇಹಿತನೊಂದಿಗೆ ಆಗಮಿಸಿ ಕೊಠಡಿಯ ಬಾಗಿಲ ಚಿಲಕ ಹಾಕಿ ಒಬ್ಬರ ನಂತರ ಒಬ್ಬರು ಅತ್ಯಾಚಾರವೆಸಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ