ಹತ್ಯೆಗೈದು, ಮನೆಯ ಫ್ರಿಡ್ಜ್ನಲ್ಲೇ ಬಚ್ಚಿಟ್ರು!?
ಮೃತ ದುರ್ದೈವಿಯನ್ನು ಝಾಕಿರ್ ಎಂದು ಗುರುತಿಸಲಾಗಿದ್ದು, ಶುಕ್ರವಾರ ಸಂಜೆ 7.15 ರ ಸುಮಾರಿಗೆ ಆತನ ಮೊಬೈಲ್ಗೆ ಸಂಬಂಧಿಯೊಬ್ಬರು ಕರೆ ಮಾಡಿದ್ದಾರೆ.
ಆದರೆ ಎಷ್ಟು ಬಾರಿ ಕರೆ ಮಾಡಿದರೂ, ಝಾಕಿರ್ ಕರೆ ಸ್ವೀಕರಿಸದ ಹಿನ್ನೆಲೆ ಸಂಬಂಧಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಝಾಕಿರ್ ಮನೆಗೆ ತಲುಪಿ ಪರಿಶೀಲನೆ ನಡೆಸಿದ ಪೊಲೀಸರಿಗೆ ವ್ಯಕ್ತಿ ಶವ ರೆಫ್ರಿಜರೇಟರ್ನಲ್ಲಿ ಕಂಡು ಬಂದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.