ಪತಿಯ ಎದುರೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ !

ಮಂಗಳವಾರ, 27 ಸೆಪ್ಟಂಬರ್ 2022 (09:35 IST)
ರಾಂಚಿ : ಪತಿಯ ಎದುರೇ ಮಹಿಳೆಯ ಮೇಲೆ 6 ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಜಾರ್ಖಂಡ್ದಲ್ಲಿ ನಡೆದಿದೆ.

ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ 22 ವರ್ಷದ ಮಹಿಳೆಯು ತನ್ನ ಅತ್ತೆಯ ಮನೆಯಲ್ಲಿ ಜಗಳವಾಡಿ ಕಾಲ್ನಡಿಗೆ ಮೂಲಕ ಪಕ್ಕದ ಊರಲ್ಲಿರುವ ತಂದೆ ಮನೆಗೆ ಹೋಗುತ್ತಿದ್ದಳು.

ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಹುಡುಕುತ್ತಾ ಆಕೆಯ ಪತಿ ಹಾಗೂ ಅವರ ಸಂಬಂಧಿ ಬೈಕ್ನಲ್ಲಿ ಹೊರಟರು. ಈ ವೇಳೆ ಆ ಮಹಿಳೆ ರಸ್ತೆಯಲ್ಲಿ ಸಿಕ್ಕಿದ್ದಾಳೆ.

ಇದರಿಂದಾಗಿ ಆಕೆಯ ಪತಿ ಮನವೊಲಿಸಿ ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಅದೇ ವೇಳೆ ಬಂದ 6 ಜನರು ಮಹಿಳೆಯ ಪತಿ ಹಾಗೂ ಆಕೆಯ ಸಂಬಂಧಿಯನ್ನು ಥಳಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿದರು. 

ಜೊತೆಗೆ ತೀವ್ರ ಗಾಯಗೊಂಡ ಸಂಬಂಧಿಯನ್ನು ಹಾಗೂ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಮಹಿಳೆಯ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ