ತುಂಬು ಗರ್ಭಿಣಿ ಮೇಕೆ ಮೇಲೆ ಗ್ಯಾಂಗ್ ರೇಪ್ ಮಾಡಿದ ಕಾಮಿಗಳು!

ಗುರುವಾರ, 31 ಮಾರ್ಚ್ 2022 (07:48 IST)
ತಿರುವನಂತಪುರಂ : ತುಂಬು ಗರ್ಭಿಣಿ ಮೇಕೆ ಮೇಲೆ ಮೂರು ಮಂದಿ ವಿಕೃತಕಾಮಿಗಳು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ಕೇರಳದ ಕಾಞಂಗಾಡು ಪೇಟೆಯಲ್ಲಿ ನಡೆದಿದೆ.

ಮೂವರು ವಿಕೃತಕಾಮಿಗಳು ಮೇಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದು ಹಾಕಿದ್ದಾರೆ. ಕೊಟ್ಟಚೇರಿಯ ಎಲೈಟ್ ಹೋಟೆಲ್ಗೆ ಸೇರಿದ ಈ ಮೇಕೆ ನಾಲ್ಕು ತಿಂಗಳ ಗರ್ಭಿಣಿಯಾಗಿತ್ತು.

ಈ ಸಂಬಂಧ ಹೋಟೆಲ್ ಉದ್ಯೋಗಿ ಸೆಂಥಿಲ್ನನ್ನು ಬಂಧಿಸಿದ್ದೇವೆ. ಇತರ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

ನಸುಕಿನ ಜಾವ 1.30ರ ಸುಮಾರಿಗೆ ಮೇಕೆ ಸದ್ದು ಕೇಳಿಬಂದಿದೆ. ಹೊಟೇಲ್ನ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದು ನೋಡಿದ್ದಾರೆ. ಆಗ ಮೂವರು ಪುರುಷರು ಗೋಡೆ ಹಾರಿ ಪರಾರಿಯಾಗಿದ್ದಾರೆ. ಈ ವೇಳೆ ಒಬ್ಬ ಆರೋಪಿ ಸೆಂಥಿಲ್ನನ್ನು ಹಿಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ