ಗ್ಯಾಂಗ್‌ರೇಪ್‌ಗೆ ಬಲಿಯಾದ ಯುವತಿಯ ಮೇಲೆ ಮತ್ತೆ ಅತ್ಯಾಚಾರ

ಶನಿವಾರ, 16 ಜುಲೈ 2016 (13:43 IST)
ಅತ್ಯಾಚಾರಕ್ಕೊಳಗಾಗಿದ್ದ ದಲಿತ ಯುವತಿಯನ್ನು ಅದೇ ಆರೋಪಿ ಮತ್ತೊಮ್ಮೆ ಅತ್ಯಾಚಾರವೆಸಗಿದ ಹೇಯ ಕೃತ್ಯ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ರೋಹ್ಟಕ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾದ ಯುವತಿಯನ್ನು ಮೂರು ವರ್ಷಗಳ ಹಿಂದೆ ಭಿವಾನಿ ನಗರದಲ್ಲಿ ಐವರು ಆರೋಪಿಗಳು ಗ್ಯಾಂಗ್‌ರೇಪ್ ಎಸಗಿದ್ದರು. ಘಟನೆಯಿಂದ ನೊಂದ ಯುವತಿಯ ಕುಟುಂಬದವರು ರೋಹ್ಟಕ್‌ ನಗರಕ್ಕೆ ಬಂದು ವಾಸವಾಗಿದ್ದರು.
 
ನಿನ್ನೆ ಕಾಲೇಜಿಗೆ ಹೋಗಿದ್ದ ಪುತ್ರಿ ಮನೆಗೆ ಬಂದಿರಲಿಲ್ಲ. ನಂತರ ಸುಖಾಪುರಾ ಪ್ರದೇಶದಲ್ಲಿ ಪ್ರಜ್ಞಾವಸ್ಥೆಯಲ್ಲಿ ಬಟ್ಟೆಗಳನ್ನು ಹರಿದ ಸ್ಥಿತಿಯಲ್ಲಿ ಯುವತಿ ಪತ್ತೆಯಾಗಿದ್ದಳು.
 
ಕಳೆದ ಮೂರು ವರ್ಷಗಳ ಹಿಂದೆ ಪುತ್ರಿ ಮೇಲೆ ಆರೋಪಿಗಳು ಅತ್ಯಾಚಾರವೆಸಗಿದ್ದಾಗ ಆರೋಪಿಗಳ ವಿರುದ್ಧ ರೇಪ್ ಪ್ರಕರಣ ದಾಖಲಿಸಲಾಗಿತ್ತು. ರೇಪ್ ಪ್ರಕರಣ ಹಿಂಪಡೆದಿರಲಿಲ್ಲ. ಆದ್ದರಿಂದ ಸೇಡು ತೀರಿಸಿಕೊಳ್ಳಲು ಅದೇ ಆರೋಪಿಗಳು ಅತ್ಯಾಚಾರವೆಸಗಿದ್ದಾರೆ ಎಂದು ಯುವತಿಯ ಕುಟುಂಬದ ಪೋಷಕರು ತಿಳಿಸಿದ್ದಾರೆ.
 
ಅತ್ಯಾಚಾರ ಪ್ರಕರಣವನ್ನು ಹಿಂಪಡೆಯುವಂತೆ ಆರೋಪಿಗಳು ಜೀವ ಬೆದರಿಕೆ ಹಾಕುತ್ತಿದ್ದರು. ಆದರೆ, ನಾವು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ದರಿಂದ ಮತ್ತೆ ನಮ್ಮ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಪ್ರಜ್ಞೆ ಮರಳಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ ಯುವತಿ, ತಾನು ಕಾಲೇಜಿನ ಗೇಟ್ ಬಳಿ ನಿಂತಿರುವಾಗ ಕಾರಿನಲ್ಲಿ ಬಂದ ಅದೇ ಆರೋಪಿಗಳು ನನ್ನನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿಸಿದ್ದಾಳೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ