ಗಂಗೂಲಿ ರಾಜಕೀಯ ಪ್ರವೇಶ ಫಿಕ್ಸ್?

ಗುರುವಾರ, 2 ಜೂನ್ 2022 (08:23 IST)
ಮುಂಬೈ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಯೊಂದು ಹರಿದಾಡುತ್ತಿದೆ.
 
ಇದಕ್ಕೆ ಕಾರಣ ಗಂಗೂಲಿಯ ಒಂದು ಟ್ವೀಟ್. ಆ ಬಳಿಕ ಇದೀಗ ಗಂಗೂಲಿ ರಾಜಕೀಯಕ್ಕೆ ಎಂಟ್ರಿಕೊಡುವುದು ಖಚಿತ ಎಂಬ ಮಾತು ಎಲ್ಲಡೆ ಕೇಳಿ ಬರುತ್ತಿದೆ. ಹೌದು ಕ್ರಿಕೆಟ್ನಲ್ಲಿ ಭಾರತ ತಂಡದ ನಾಯಕನಾಗಿ ಯಶಸ್ವಿಯಾಗಿ ಮುನ್ನಡೆಸಿದ ಗಂಗೂಲಿ, 2019ರಲ್ಲಿ ತಮಗೆ ಒಲಿದು ಬಂದ ಬಿಸಿಸಿಐ ಅಧ್ಯಕ್ಷ ಪಟ್ಟವನ್ನು ಕೂಡ ಉತ್ತಮವಾಗಿ ನಿಭಾಯಿಸಿ ಹಲವು ಬದಲಾವಣೆಗಳೊಂದಿಗೆ ಯಶಸ್ಸಿನ ಮೇಟ್ಟಿಲೇರಿಸಿದ್ದಾರೆ.

ಈ ನಡುವೆ ಇಂದು ದಿಢೀರ್ ಆಗಿ ಒಂದು ಟ್ವೀಟ್ ಮಾಡಿದ ಗಂಗೂಲಿ, 1992ರಲ್ಲಿ ನನ್ನ ಕ್ರಿಕೆಟ್ ವೃತ್ತಿ ಜೀವನ ಆರಂಭಗೊಂಡು ಇದೀಗ 2022ಕ್ಕೆ 30 ವರ್ಷಗಳು ಸಂದಿದೆ. ಅಲ್ಲಿಂದ ಇಲ್ಲಿವರೆಗೂ ಕ್ರಿಕೆಟ್ ನನಗೆ ಎಲ್ಲವನ್ನೂ ಕೊಟ್ಟಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರ ಬೆಂಬಲ ನನಗೆ ಸಿಕ್ಕಿದೆ. ನನ್ನ ಕ್ರಿಕೆಟ್ ವೃತ್ತಿ ಬದುಕಿಗೆ ಸಹಕರಿಸಿದ, ನಾನು ಈ ಸ್ಥಾನಕ್ಕೆ ಬರಲು ಬೆಂಬಲ ನೀಡಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ. ನಾನು ಇಂದು ಇನ್ನೊಂದು ಹೊಸ ಪ್ರಾರಂಭದ ಹೆಜ್ಜೆಯನ್ನಿಟ್ಟಿದ್ದು ಇದು ಹಲವರಿಗೆ ನೆರವಾಗಲಿದೆ ಎನ್ನುವ ವಿಶ್ವಾಸ ನನಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ