ಗೆಳೆಯನ ಗುಪ್ತಾಂಗಕ್ಕೆ ಕತ್ತರಿ ಹಾಕಿದ ಸಲಿಂಗಿ

ಸೋಮವಾರ, 12 ಸೆಪ್ಟಂಬರ್ 2022 (08:50 IST)
ನವದೆಹಲಿ: ಸಲಿಂಗಿ ವ್ಯಕ್ತಿಯೊಬ್ಬ ತನ್ನ ಗೆಳೆಯನ ಗುಪ್ತಾಂಗವನ್ನೇ ಕತ್ತರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ತಮ್ಮಿಬ್ಬರ ಖಾಸಗಿ ವಿಡಿಯೋಗಳನ್ನಿಟ್ಟುಕೊಂಡು ಗೆಳೆಯ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಹೋಟೆಲ್ ಒಂದರಲ್ಲಿ ತಾವಿಬ್ಬರೂ ಏಕಾಂತದಲ್ಲಿದ್ದಾಗ ವಿಡಿಯೋ ಮಾಡಿಕೊಂಡಿದ್ದ ಗೆಳೆಯ ಅದನ್ನಿಟ್ಟುಕೊಂಡು ಹಲವು ಬಾರಿ ಹಣ ಪೀಕಿದ್ದ. ಹಣ ಕೊಡದೇ ಇದ್ದರೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಹಾಕುತ್ತಿದ್ದ.

ಇದರಿಂದ ಬೇಸತ್ತಿದ್ದ ವ್ಯಕ್ತಿ ಹೋಟೆಲ್ ಒಂದಕ್ಕೆ ಕರೆಸಿ ವಿಡಿಯೋ ಡಿಲೀಟ್ ಮಾಡಲು ಹೇಳಿದ್ದ. ಆದರೆ ಆತ ಕೇಳದೇ ಇದ್ದಾಗ ಆಕ್ರೋಶಗೊಂಡು ಗುಪ್ತಾಂಗವನ್ನೇ ಕತ್ತರಿಸಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ