ಸಹರಾಣಾಪುರ ಜಿಲ್ಲೆಯ ದೇವ್‌ಬಾದ್ ಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ದೇಶದ ಜನರು ರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆದರೆ ರಾಮ ಭಕ್ತರೇ ಇಲ್ಲದಿದ್ದರೆ ಮಂದಿರ ನಿರ್ಮಾಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ 22 ಪ್ರತಿಶತ ಹಿಂದೂಗಳಿದ್ದರು. ಮತ್ತೀಗ ಅದು 1 %ಕ್ಕೆ ಇಳಿದಿದೆ. ಅದೇ ಭಾರತದ ಮಟ್ಟಿಗೆ ಹೇಳುವುದಾದರೆ ಆ ಸಮಯದಲ್ಲಿ ಹಿಂದೂಗಳ ಸಂಖ್ಯೆ 90%, ಇಸ್ಲಾಂ ಧರ್ಮೀಯರ ಸಂಖ್ಯೆ 10% ಇತ್ತು. ಆದರೀಗ ಮುಸ್ಲಿಮರ ಜನಸಂಖ್ಯೆ 24% ಕ್ಕೇರಿದರೆ, ಹಿಂದೂಗಳು 76% ಕ್ಕೆ ಇಳಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.