ಪೋಷಕರು ಸ್ಕೂಟಿ ಕೊಡಿಸಲು ನಿರಾಕರಿಸಿದ್ದರಿಂದ ಫ್ಲೈಓವರ್‌ನಿಂದ ಹಾರಿದ ಪುತ್ರಿ

ಬುಧವಾರ, 25 ಮೇ 2016 (15:28 IST)
ಫೋಷಕರು ಸ್ಕೂಟಿ ಕೊಡಿಸಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ 15 ವರ್ಷದ ಬಾಲಕಿ ಫ್ಲೈಓವರ್ ಮೇಲಿನಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ವರದಿಯಾಗಿದೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
 
ಉತ್ತರ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದ ನಿವಾಸಿಯಾದ ಬಾಲಕಿ, ಪೋಷಕರೊಂದಿಗೆ ಸ್ಕೂಟಿ ಕೊಡಿಸುವಂತೆ ಜಗಳವಾಡಿ, ನಂತರ ಮಧ್ಯಾಹ್ನ ಸುಮಾರು 1,45 ಗಂಟೆಗೆ ಮುಕರ್ಬಾ ಫ್ಲೈಓವರ್‌‌ಗೆ ತೆರಳಿ ಅಲ್ಲಿಂದ ಹಾರಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಫ್ಲೈಓವರ್‌ನಿಂದ ಹಾರಿದ್ದರಿಂದ ಬಾಲಕಿಯ ಕಾಲು ಮುರಿದಿದ್ದರಿಂದ ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅಪಾಯದಿಂದ ಪಾರಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.
 
ಪೊಲೀಸ್ ಮೂಲಗಳ ಪ್ರಕಾರ, ಇತ್ತೀಚೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿದ್ದ ಪಾಲಕಿ ಸ್ಕೂಟಿ ಕೊಡಿಸುವಂತೆ ತಂದೆತಾಯಿಯ ಮೇಲೆ ಒತ್ತಡ ಹೇರಿದ್ದಾಳೆ.  ನಾಲ್ಕನೇ ಶ್ರೇಣಿಯ ಉದ್ಯೋಗಿಯಾದ ತಂದೆ, ಸ್ಕೂಟಿ ಖರೀದಿಸುವ ಸಾಮರ್ಥ್ಯ ತಮ್ಮಲ್ಲಿಲ್ಲ ಎಂದು ತಿಳಿಸಿದ್ದಾರೆ. ಆದರೆ, ತಂದೆಯ ಉತ್ತರದಿಂದ ಆಕ್ರೋಶಗೊಂಡ ಬಾಲಕಿ ಫ್ಲೈಓವರ್‌ನಿಂದ ಹಾರಿದ್ದಾಳೆ.  

 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ