ಅಪ್ರಾಪ್ತ ಯುವತಿಯ ಮೇಲೆ ಅಮಾನುಷ ಅತ್ಯಾಚಾರ: ಆರೋಪಿಗಳ ಬಂಧನ

ಸೋಮವಾರ, 11 ಡಿಸೆಂಬರ್ 2023 (10:21 IST)
ನಗರದ ಖಾಸಗಿ ಶಾಲೆಯಲ್ಲಿ 11 ನೇ ತರಗತಿಯಲ್ಲಿ ಓದುತ್ತಿರುವ ಹದಿಹರೆಯದ ಯುವತಿಯನ್ನು ರಾತ್ರಿ ಸಮಯದಲ್ಲಿ  ಪ್ಲಾಟ್ ಒಂದಕ್ಕೆ ಆಕೆಯನ್ನು ಎಳೆದೊಯ್ದ ಯುವಕರು ಆಕೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಸಿದ್ದಾರೆ. ಮಾರನೆಯ ದಿನ ಬೆಳಿಗ್ಗೆ ಆಕೆಯ ಮನೆ ಬಳಿ ದೂಡಿ ಹೋಗಿದ್ದಾರೆ.  ಪರಾರಿಯಾಗಿರುವ ನಾಲ್ಕನೆಯ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
 
ರವಿವಾರ ರಾತ್ರಿ ಆಕೆಯನ್ನು ಅಪಹರಿಸಿದ್ದ ಆರೋಪಿಗಳು ಸೋಮವಾರ ಬೆಳಿಗ್ಗೆ  ಆಕೆಯನ್ನು ಮರಳಿ ಕರೆ ತಂದು, ಆಕೆಯ ಮನೆಯ ಹೊರಗೆ ತಂದು ಬಿಟ್ಟು ಹೋಗಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಕೊಲ್ಲುವುದಾಗಿ ಅವರು ಬೆದರಿಕೆ ಒಡ್ಡಿದ್ದಾರೆ. 8 ಗಂಟೆ ಸುಮಾರಿಗೆ ಬಾಲಕಿ  ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಮಾಹಿತಿ ಪಡೆದ ಪೊಲೀಸರು ಆಕೆಯ ಮನೆಗೆ ಬಂದು ದೂರನ್ನು ದಾಖಲಿಸಿಕೊಂಡಿದ್ದಾರೆ. ಸಿವಿಲ್ ಆಸ್ಪತ್ರೆಯಲ್ಲಿ ಪೀಡಿತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆಕೆಯ ಮೇಲೆ ಅತ್ಯಾಚಾರವಾಗಿರುವುದು ಸಾಬೀತಾಗಿದೆ.  
 
ಹದಿಹರೆಯದ ಯುವತಿ ಮನೆ ಹೊರಗೆ ನಿಂತು ತನ್ನ ಮೊಬೈಲ್‌ನಲ್ಲಿ ವೈ-ಫೈ ಕನೆಕ್ಟ್ ಮಾಡಲು ಪ್ರಯತ್ನಿಸುತ್ತಿದ್ದಳು. ಆ ಸಮಯದಲ್ಲಿ ಕಾರೊಂದು ಅವಳ ಮನೆಯ ಬಳಿ ಬಂದು ನಿಂತಿತು. ನಾಲ್ಕು ಜನರಿದ್ದ ಕಾರಿನಲ್ಲಿ ತನ್ನ ಸ್ನೇಹಿತ ಇದ್ದುದನ್ನು ನೋಡಿದ ಆಕೆ ಅವನ ಬಳಿ ಮಾತನಾಡಲು ಕಾರ್ ಬಳಿ ಹೋಗಿದ್ದಾಳೆ. ಆಗ ಆಕೆಯನ್ನು ಕಾರ್ ಒಳಕ್ಕೆ ಎಳೆದ ಹುಡುಗರು ನಂತರ ಗ್ಯಾಂಗ್‌ರೇಪ್ ಎಸಗಿದ್ದಾರೆ. 
 
17 ವರ್ಷದ ಅಪ್ರಾಪ್ತೆಯನ್ನು  ಆಕೆಯ ಮನೆಯ ಹೊರಗಡೆಯೇ ಅಪಹರಿಸಿದ ನಾಲ್ಕು ಜನ ಯುವಕರು ಪ್ಲಾಟ್ ಒಂದಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಗುರಗಾಂವ್‌ನಲ್ಲಿ ನಡೆದಿದೆ. ಆರೋಪಿಗಳಲ್ಲಿ ಒಬ್ಬ ಆಕೆಗೆ ಪರಿಚಿತ ವ್ಯಕ್ತಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 
 
ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದ್ದು,ಅವರಲ್ಲೊಬ್ಬ 12 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಬಾಲಕಿಯ ಪರಿಚಯ ಹೊಂದಿದ್ದ ಆತ ಆಕೆಯ ಜತೆ ಫೋನ್ ಸಂಭಾಷಣೆ ನಡೆಸುತ್ತಿದ್ದುದು ಕಾಲ್ ರಿಕಾರ್ಡ್ಸ್‌ ಮೂಲಕ ಸಾಬೀತಾಗಿದೆ. ಇನ್ನೊಬ್ಬ ಅಪ್ರಾಪ್ತನಾಗಿದ್ದು 11 ನೇ ತರಗತಿಯಲ್ಲಿ ಓದುತ್ತಿದ್ದಾನೆ.  ಮೂರನೆಯ ಆರೋಪಿ ಹೊಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ನಾಲ್ಕನೆಯ ಆರೋಪಿ ಪರಾರಿಯಾಗಿದ್ದಾನೆ. ಅಪ್ರಾಪ್ತನನ್ನು ಹೊರತು ಪಡಿಸಿದರೆ ಉಳಿದ ಮೂವರು 19 ರಿಂದ 23 ವರ್ಷ ವಯಸ್ಸಿನವರಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ