ಲೈಂಗಿಕ ಹಸಿವನ್ನು ನೀಗಿಸುವಂತೆ ಒತ್ತಡ: ಮಹಿಳಾ ನಕ್ಸಲೀಯರ ಗೋಳು

ಶುಕ್ರವಾರ, 8 ಡಿಸೆಂಬರ್ 2023 (13:28 IST)
ಚತ್ತೀಸ್‌ಗಢದಲ್ಲಿ ಸುಕ್ಮಾದ ಮಾವೋವಾದಿ ನಕ್ಸಲರ ಗುಂಪಿನಲ್ಲಿದ್ದ ಇಬ್ಬರು ಮಹಿಳಾ ಕಮಾಂಡರ್‌ಗಳು ಮಾವೋವಾದಿ ನಕ್ಸಲೀಯರ ಜೀವನದ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಒಡಿಶಾದ ಮಾಲ್ಕಂಗಿರಿ ಪೊಲೀಸ್ ಠಾಣೆಗೆ ಶರಣಾದ ಈ ಮಹಿಳಾ ನಕ್ಸಲೀಯರು ತಮ್ಮ ಭಯಾನಕ ಕಥೆಯನ್ನು ಬಿಚ್ಚಿಟ್ಟರು. ಸಹಚರರ ಪತ್ನಿಯರ ಮೇಲೆ ಕೂಡ ಮಾವೋವಾದಿಗಳು ಕಣ್ಣು ಹಾಕುತ್ತಿದ್ದರು.
 
'ಪುರುಷ ನಕ್ಸಲೀಯರ ಲೈಂಗಿಕ ಹಸಿವನ್ನು ನೀಗಿಸುವಂತೆ ನಮಗೆ ಬಲವಂತ ಮಾಡುತ್ತಿದ್ದರು. ಅದಕ್ಕೆ ನಿರಾಕರಿಸಿದರೆ ನಿರ್ದಯವಾಗಿ ನಮ್ಮನ್ನು ಥಳಿಸುತ್ತಿದ್ದರು ಎಂದು ನಕ್ಸಲೀಯರ ಗುಂಪಿಗೆ ಸೇರಿದ್ದ ಮಹಿಳೆಯೊಬ್ಬಳು ಘೋರ ಘಟನೆಯನ್ನು ಬಹಿರಂಗಪಡಿಸಿದ್ದಾಳೆ.

ಈ ನಕ್ಸಲೀಯ ದಂಡಾಧಿಪತಿಗಳು ನಕ್ಸಲೀಯ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಮಹಿಳಾ ಮಾವೋವಾದಿಗಳ ಈ ಭಯಾನಕ ವಾಸ್ತವತೆ ಬಹಿರಂಗವಾಗಿದ್ದು ಇದೇ ಮೊದಲಲ್ಲ.

ಮಾಜಿ ನಕ್ಸಲೀಯ ನಾಯಕಿ ಶೋಭಾ ಮಂಡಿ ತಮ್ಮ 'ಏಕ್ ಮಾವೋವಾದಿ ಕಿ ಡೈರಿ' ಎಂಬ ಪುಸ್ತಕದಲ್ಲಿ ನಕ್ಸಲೀಯರ ಹಿಂದಿನ ದಾರುಣ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ಮಾವೋವಾದಿಗಳ ಗುಂಪಿನಲ್ಲಿ ನ್ಯಾಯ ಸಿಗಬಹುದೆಂದು ಆಶಿಸಿ ಇಲ್ಲಿಗೆ ಸೇರಿದ್ದಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ