ನಾಲ್ಕು ವರ್ಷದ ಬಾಲಕನ ಹೂತು ಹಾಕಿದ ಯವತಿ

ಗುರುವಾರ, 15 ಅಕ್ಟೋಬರ್ 2020 (10:52 IST)
ಮುಂಬೈ: ನಾಲ್ಕು ವರ್ಷದ ಬಾಲಕನನ್ನು ಉಸಿರುಗಟ್ಟಿಸಿ ಆತ ಪ್ರಜ್ಞಾಹೀನನಾದಾಗ ಗಾಬರಿಗೊಂಡ ಅಪ್ರಾಪ್ತ ಯುವತಿ ಬಾಲಕನನ್ನು ಗೋಣಿ ಚೀಲದಲ್ಲಿ ತುಂಬಿ ಬಿಸಾಕಿದ ಘಟನೆ ಮುಂಬೈನಲ್ಲಿ ನಡೆದಿದೆ.


ಪೋಷಕರು ಮನೆಯಲ್ಲಿಲ್ಲದೇ ಇದ್ದಾಗ ನಾಲ್ಕು ವರ್ಷದ ಬಾಲಕ ಗ್ರೌಂಡ್ ಫ್ಲೋರ್ ನಲ್ಲಿ ಆಟವಾಡುತ್ತಿದ್ದ. ಈ ವೇಳೆ ಆತನಿಗೆ ಬಾತ್ ರೂಂಗೆ ಹೋಗಲು ಅವಸರವಾಗಿತ್ತು. ಹೀಗಾಗಿ ಆರೋಪಿ ಯುವತಿಯ ಮನೆಗೆ ಬಂದು ಬಾತ್ ರೂಂ ಬಳಸಿದ್ದ. ಆ ವೇಳೆ ಯುವತಿ ಒಬ್ಬಳೇ ಮನೆಯಲ್ಲಿದ್ದಳು. ಈ ವೇಳೆ ಬಾಲಕನ ಜತೆ ಕೆಲವು ಕಾಲ ಯುವತಿ ಆಟವಾಡುತ್ತಿದ್ದಳು. ಆದರೆ ಆಡುವ ಭರದಲ್ಲಿ ಆತನ ಮುಖಕ್ಕೆ ದಿಂಬು ಇಟಟ ಪರಿಣಾಮ ಬಾಲಕ ಪ್ರಜ್ಞಾಹೀನನಾಗಿದ್ದ. ಇದರಿಂದ ಗಾಬರಿಗೊಂಡ ಯುವತಿ ಬಾಲಕನನ್ನು ಗೋಣಿ ಚೀಲದಲ್ಲಿ ತುಂಬಿ ಕಿಟಿಕಿಯಿಂದ ಹೊರಗೆಸೆದಿದ್ದಳು. ಪರಿಣಾಮ ಬಾಲಕ ಮೃತಪಟ್ಟಿದ್ದ. ಮನೆಗೆ ಬಂದ ಪೋಷಕರು ಬಾಲಕನನ್ನು ಹುಡುಕಿದಾಗ ಗೋಣಿ ಚೀಲದಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಯುವತಿಯನ್ನು ವಶಕ್ಕೆ ಪಡೆಯಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ