ಬೀದಿಯಲ್ಲಿ ಹುಡುಗಿರು ಇನ್ಮುಂದೆ ಮೊಬೈಲ್ ಬಳಸುವಂತಿಲ್ಲ!

ಬುಧವಾರ, 3 ಮೇ 2017 (10:46 IST)
ಮಥುರಾ: ಮನೆಯಿಂದ ಹೊರಗೆ ಬೀದಿಯಲ್ಲಿ ನಿಂತುಕೊಂಡು ಹುಡುಗಿಯರು ಮೊಬೈಲ್ ಬಳಸುವಂತಿಲ್ಲ ಎಂದು ಮಥುರಾದ ಪಂಚಾಯತು ತೀರ್ಪು ನೀಡಿದೆ.

 
ವಡೋರಾ ಗ್ರಾಮದ ಪಂಚಾಯತ್ ಮುಖ್ಯಸ್ಥರು ಈ ಆದೇಶ ಹೊರಡಿಸಿದ್ದಾರೆ. ಮುಹಮ್ಮದ್ ಗಫೂರ್ ಎಂಬ ಮಾಜಿ ಪಂಚಾಯತ್ ಮುಖ್ಯಸ್ಥ ಈ ಆದೇಶ ಹೊರಡಿಸಿದ್ದಾರೆ. ಅದಕ್ಕೆ ಒಂದು ಕಾರಣವನ್ನೂ ನೀಡಿದ್ದಾರೆ.

ಹುಡುಗಿಯರು ಮನೆಯಿಂದ ಹೊರಗೆ ಹೋಗುವಾಗ ಮೊಬೈಲ್ ಬಳಸುವುದರಿಂದ ಹುಡುಗಿಯರು ಹುಡುಗರ ಜತೆ ಓಡಿ ಹೋಗುವ ಸಾಧ್ಯತೆ ಹೆಚ್ಚು. ಹೀಗಾಗಿ ಮೊಬೈಲ್ ಬಳಕೆ  ನಿಷೇಧಿಸಲಾಗುವುದು. ತಪ್ಪಿದವರಿಗೆ 2100 ರೂ. ದಂಡ ವಿಧಿಸಲಾಗುವುದು ಎಂದು ಪಂಚಾಯತು ಮುಖ್ಯಸ್ಥರು ಆದೇಶಿಸಿದ್ದಾರೆ.

ಅಷ್ಟೇ ಅಲ್ಲ, ಗೋ ಮಾಂಸ ಮಾರಾಟ ಮಾಡುವವರಿಗೆ 2.5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದಂತೆ! ಮುಸ್ಲಿಂ ಮುಖಂಡರೊಬ್ಬರು ಗೋ ಹತ್ಯೆ ಮಾಡುವುದನ್ನು ಉತ್ತೇಜಿಸುವುದಿಲ್ಲ ಎಂದಿರುವುದು ನಿಜಕ್ಕೂ ವಿಶೇಷವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ