ಎಎಪಿಗೆ ಅವಕಾಶ ನೀಡಿ : ಕೇಜ್ರಿವಾಲ್

ಭಾನುವಾರ, 13 ಫೆಬ್ರವರಿ 2022 (11:50 IST)
ಪಣಜಿ : ಗೋವಾ ಮತ್ತು ಉತ್ತರಾಖಂಡದ ಜನರಿಗೆ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮನವಿ ಮಾಡಿದರು.

ವಿಧಾನಸಭೆ ಚುನಾವಣೆಗೆ ಒಂದು ದಿನ ಮುಂಚಿತವಾಗಿ ಕಲ್ಯಾಣ ಮತ್ತು ಅಭಿವೃದ್ಧಿ ಸಂಬಂಧಿತ ಕೆಲಸಗಳನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ.

ಉತ್ತರಾಖಂಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 10 ವರ್ಷ ಆಡಳಿತ ನಡೆಸಿವೆ. ಗೋವಾದಲ್ಲಿ ಕಾಂಗ್ರೆಸ್ 27 ವರ್ಷ, ಬಿಜೆಪಿ 15 ವರ್ಷ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಗೋವಾ ಮತ್ತು ಉತ್ತರಾಖಂಡದ ಜನರನ್ನು ಲೂಟಿ ಮಾಡಿದೆ.

ನೀವು ಅವರಿಗೆ ಮತ್ತೊಮ್ಮೆ ಮತ ಹಾಕಿದರೆ, ಅವರು ನಿಮ್ಮನ್ನು ಲೂಟಿ ಮಾಡುವುದನ್ನು ಮುಂದುವರಿಸುತ್ತಾರೆ. ಈ ಬಾರಿ ಹೊಸ ಪಕ್ಷ (ಎಎಪಿ) ಇದೆ. ನಾವು ಕಲ್ಯಾಣ, ಅಭಿವೃದ್ಧಿಗೆ ಸಂಬಂಧಿಸಿದ ಕೆಲಸಗಳನ್ನು ನೀಡುತ್ತೇವೆ. ಆಮ್ ಆದ್ಮಿ ಪಕ್ಷಕ್ಕೆ ಅವಕಾಶ ನೀಡಿ ಎಂದಿದ್ದಾರೆ.

ಶಿಕ್ಷಣ, ಆರೋಗ್ಯ ಮತ್ತು ವಿದ್ಯುತ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೆಹಲಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ಮಾತನಾಡಿದ ಕೇಜ್ರಿವಾಲ್ ಅವರು, ಎರಡೂ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದರೆ ತಾವು ಅದೇ ರೀತಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ