ನವದೆಹಲಿ : ಮಾನವೀಯ ನೆರವು ನೀಡುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿ ಪತ್ರ ಬರೆದಿದ್ದಾರೆ. ಈ ಪತ್ರವನ್ನು ವಿದೇಶಾಂಗ ಸಚಿವ ಎಮಿನೆ ಝಫರೋವಾ ಮುಖಾಂತರ ಮೋದಿ ಅವರಿಗೆ ಪತ್ರ ರವಾನಿಸಿದ್ದಾರೆ.
ಉಕ್ರೇನ್ ವಿದೇಶಾಂಗ ಸಚಿವೆ ಎಮಿನೆ ಅವರು ಭಾರತ ಪ್ರವಾಸದಲ್ಲಿದ್ದಾರೆ. ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರೊಂದಿಗೆ ಮಾತುಕತೆ ನಡೆಸಿದ ಅವರು, ಹೆಚ್ಚುವರಿ ಮಾನವೀಯ ಸಹಾಯಕ್ಕಾಗಿ ವಿನಂತಿಸಿದ್ದಾರೆ.
ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳು ಸೇರಿದಂತೆ ಹೆಚ್ಚುವರಿ ಮಾನವೀಯ ನೆರವಿಗಾಗಿ ಉಕ್ರೇನ್ ವಿನಂತಿಸಿದೆ. ಉಕ್ರೇನ್ಗೆ ವರ್ಧಿತ ಮಾನವೀಯ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ ಎಂದು ಲೇಖಿ ಟ್ವೀಟ್ ಮಾತಿ ತಿಳಿಸಿದ್ದಾರೆ.