ಮಹದಾಯಿ ನದಿ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದ ಗೋವಾ ಸಿಎಂ
ಶನಿವಾರ, 30 ಜನವರಿ 2021 (12:58 IST)
ಗೋವಾ : ಮಹಾರಾಷ್ಟ್ರದ ಸಿಎಂ ಬಳಿಕ ಇದೀಗ ಗೋವಾ ಸಿಎಂ ಪ್ರಮೋದ್ ಸಾವಂತ್ ಮಹದಾಯಿ ನದಿ ವಿಚಾರದಲ್ಲಿ ಕ್ಯಾತೆ ತೆಗದಿದ್ದಾರೆ.
ಮಹದಾಯಿ ವಿಚಾರದಲ್ಲಿ ಯಾರಿಗೂ ಮಣಿಯಲ್ಲ. ಪಕ್ಷ ಬದಿಗಿಟ್ಟು ಮಹದಾಯಿ ನೋಡುವೆ. ಗೋವಾದಲ್ಲಿ ಬಿಜೆಪಿ ಸರ್ಕಾರ ಇದೆ. ಕೇಂದ್ರ, ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ಇದೆ. ಹಾಗಂತ ಯಾರಿಗೂ ರಾಜಿ ಆಗೋ ಪ್ರಶ್ನೆ ಇಲ್ಲ. ಮಹದಾಯಿ ವಿಷಯದಲ್ಲಿ ಪಕ್ಷದ ಮಾತು ಕೇಳಲ್ಲ ಎಂದು ಗೋವಾ ಅಸೆಂಬ್ಲಿಯಲ್ಲಿ ಗೋವಾ ಸಿಎಂ ಹೇಳಿದ್ದಾರೆ.
ಮಹದಾಯಿ ನನಗೆ ತಾಯಿ ಸಮಾನ. ಮಹದಾಯಿ ಗೋವಾದ ಜೀವನದಿ. ಈ ವಿಚಾರದಲ್ಲಿಪಕ್ಷ, ರಾಜಕೀಯ ಬದಿಗಿಡುವೆ. ಪಕ್ಷದಿಂದ ಯಾವ ಒತ್ತಡ ಬಂದರೂ ಒಪ್ಪಲ್ಲ ಗೋವಾ ಸಿಎಂ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.