ಗೋವಾ ಆರೆಸ್ಸೆಸ್ ಅಧ್ಯಕ್ಷ ಸುಭಾಶ್ ವೆಲಿಂಗ್‌ಕರ್‌ ವಜಾಕ್ಕೆ ಗೋವಾ ಮುಖ್ಯಮಂತ್ರಿ ವಿಷಾದ

ಗುರುವಾರ, 1 ಸೆಪ್ಟಂಬರ್ 2016 (11:59 IST)
ಗೋವಾ ಆರ್‌ಎಸ್ಸೆಸ್ ಮುಖ್ಯಸ್ಥರಾಗಿದ್ದ ಸುಭಾಶ್ ವೆಲಿಂಗ್‌ಕರ್ ಅವರನ್ನು ಯಾವುದೇ ಸೌಜನ್ಯತೋರಿಸದೇ ವಜಾ ಮಾಡಿದ ಕ್ರಮದ ಬಗ್ಗೆ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪಾರ್ಸೆಕರ್ ವಿಷಾದ ಸೂಚಿಸಿದ್ದಾರೆ.
 
ಇದಕ್ಕೆ ಮುಂಚೆ ಆರ್‌ಎಸ್ಸೆಸ್ ಪ್ರಚಾರ ಮುಖ್ಯಸ್ಥ ಮನಮೋಹನ್ ವೈದ್ಯ ನವದೆಹಲಿಯಲ್ಲಿ ವೆಲಿಂಗ್‌ಕರ್ ಅವರನ್ನು ಗೋವಾದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ವಿರೋಧಿಯಾಗಿ ಕೆಲಸ ಮಾಡಿದ್ದಕ್ಕಾಗಿ ವಜಾ ಮಾಡಲಾಗಿದೆ ಎಂದು ತಿಳಿಸಿದರು.
 
ಗೋವಾ ಸರ್ಕಾರದ ವಿರುದ್ಧ ಕಾರ್ಯನಿರ್ವಹಿಸಿ ರಾಜಕೀಯ ಸಂಘಟನೆ ರೂಪಿಸಿದ ಕಾರಣಕ್ಕಾಗಿ ವೆಲಿಂಗ್‌ಕರ್ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ಆರ್‌ಎಸ್ಸೆಸ್ ತಿಳಿಸಿದೆ.
 
ಮಾಜಿ ಸ್ಪೀಕರ್ ಮತ್ತು ಪರಿಸರ ಹಾಗೂ ಅರಣ್ಯ ಸಚಿವ ರಾಜೇಂದ್ರ ಅರ್ಲೆಕರ್ , ವೆಲಿಂಗ್‌ಕರ್ ಅವರು ಗೋವಾದ ಬಿಜೆಪಿ ಮುಖಂಡರಿಗೆ ಗುರುವಾಗಿ ಮತ್ತು ಕಣ್ಮಣಿಯಾಗಿ ಇದ್ದರು ಎಂದು ಹೇಳಿದ್ದು, ಅವರಿಗೆ ನಿರಾಶೆಯಾಗಿದೆಯೇ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡಲಿಲ್ಲ.
 
ಪ್ರಾದೇಶಿಕ ಭಾಷೆಯ ಕ್ಷೇತ್ರಕ್ಕೆ ಮುಖ್ಯಸ್ಥರಾಗಿದ್ದ ವೆಲಿಂಗ್‌ಕರ್, ಪ್ರಾಥಮಿಕ ಶಾಲೆಗಳಲ್ಲಿ ರಾಜ್ಯಸರ್ಕಾರದ ಬೋಧನಾ ಮಾಧ್ಯಮದ ನೀತಿಯನ್ನು ಟೀಕಿಸುತ್ತಿದ್ದರು. ಕೊಂಕಣಿ ಮತ್ತು ಮರಾಠಿ ಮುಂತಾದ ಪ್ರಾದೇಶಿಕ ಭಾಷೆಗಳಿಗಿಂತ ಇದು ಇಂಗ್ಲಿಷ್ ಭಾಷೆಗೆ ಉತ್ತೇಜಿಸುತ್ತದೆಂದು ಟೀಕಿಸಿದ್ದರು. 

ವೆಬ್ದುನಿಯಾವನ್ನು ಓದಿ