ಮತ್ತೆ ಚಿನ್ನದ ಬೆಲೆ ಏರಿಕೆ : ಕರ್ನಾಟಕದಲ್ಲಿ ಎಷ್ಟಿದೆ ತಿಳಿಯಿರಿ..
ಬುಧವಾರ, 25 ಆಗಸ್ಟ್ 2021 (12:03 IST)
ನವದೆಹಲಿ: ದೇಶದಲ್ಲಿ ಚಿನ್ನ, ಬೆಳ್ಳಿ ದರ ಏರಿಕೆ, ಇಳಿಕೆಯಾಗುತ್ತಿದೆ. ಇಂದು ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಸುಮಾರು 13 ದಿನಗಳಲ್ಲಿ 10 ಗ್ರಾಮ್ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 1,100 ರೂಪಾಯಿಗಳಷ್ಟು ಏರಿಕೆಯಾಗಿದೆ.
ಈ ವರ್ಷ ಮಾರ್ಚ್ 31ರಂದು ಚಿನ್ನದ ಬೆಲೆ ಅತ್ಯಂತ ಕಡಿಮೆಯಿತ್ತು. ಅಂದರೆ ಮಾರ್ಚ್ 31ರಂದು 41,100 ರೂಪಾಯಿ ಇದ್ದ ಚಿನ್ನದ ಬೆಲೆ ಈಗ 44,450 ರೂಪಾಯಿಯಾಗಿದೆ. ಅಂದರೆ 146 ದಿನಗಳಲ್ಲಿ 3,350 ರೂಪಾಯಿ ಹೆಚ್ಚಾಗಿದೆ. ಬೆಳ್ಳಿಯ ಬೆಲೆ ಒಂದು ಕೆಜಿಗೆ ಮಂಗಳವಾರ 62 ಸಾವಿರ ರೂಪಾಯಿ ಇದ್ದು, ಈಗ 800 ರೂಪಾಯಿ ಹೆಚ್ಚಳವಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ?
ಬೆಂಗಳೂರು: ₹44,460 (22 ಕ್ಯಾರಟ್), ₹48,500 (24 ಕ್ಯಾರಟ್), ಚೆನ್ನೈ: ₹44,860 (22 ಕ್ಯಾರಟ್), ₹48,940 (24 ಕ್ಯಾರಟ್) ಮತ್ತು ದೆಹಲಿ: ₹46,610 (22 ಕ್ಯಾರಟ್), ₹50,840 (24 ಕ್ಯಾರಟ್) ದಾಖಲಾಗಿದೆ.
ಮಂಗಳೂರು: ₹44,460 (22 ಕ್ಯಾರಟ್), ₹48,500 (24 ಕ್ಯಾರಟ್), ಮುಂಬಯಿ: ₹46,660 (22 ಕ್ಯಾರಟ್), ₹47,660 (24 ಕ್ಯಾರಟ್) ಮತ್ತು ಮೈಸೂರು: ₹44,460 (22 ಕ್ಯಾರಟ್), ₹48,500 (24 ಕ್ಯಾರಟ್)