ಕುಡುಕರಿಗೆ ಗುಡ್ ನ್ಯೂಸ್ ; ಮದ್ಯ ಮಾರಾಟಕ್ಕೆ ಸರ್ಕಾರ ಚಿಂತನೆ
ಮಂಗಳವಾರ, 7 ಏಪ್ರಿಲ್ 2020 (10:54 IST)
ನವದೆಹಲಿ : ಎಣ್ಣೆ ಸಿಗದೆ ಕಂಗಲಾಗಿದ್ದ ಕುಡುಕರಿಗೆ ಗುಡ್ ನ್ಯೂಸ್. ಷರತ್ತು ಬದ್ಧ ಮದ್ಯ ಮಾರಾಟ ಮಾಡಲು ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಅಬಕಾರಿ ಇಲಾಖೆ ಅಧಿಕಾರಿಗಳಿಂದಅಭಿಪ್ರಾಯ ಕೇಳಿರುವ ಹಣಕಾಸು ಇಲಾಖೆ, ಎಂಎಸ್ ಐಎಲ್ ಮತ್ತು ಎಂಆರ್ ಪಿ ಮದ್ಯದಂಗಡಿ ತೆರೆದರೆ ಹೇಗೆ? ಮದ್ಯ ಮಾರಾಟಕ್ಕೆ ದಿನ ಸೀಮಿತ ಸಮಯ ನಿಗದಿ ಮಾಡಿದರೆ ಹೇಗೆ? ಎಂದು ಹಣಕಾಸು ಇಲಾಖೆಅಬಕಾರಿ ಇಲಾಖೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದೆ.