ಸ್ವಾತಂತ್ರ್ಯ ನಂತರದ ದಿನ ನೆನಪಿಸಲಿರುವ ಗೂಗಲ್

ಶನಿವಾರ, 6 ಆಗಸ್ಟ್ 2022 (11:51 IST)
ನವದೆಹಲಿ : ಸ್ವಾತಂತ್ರ್ಯದ ನಂತರ 75 ವರ್ಷಗಳ ಪಯಣದಲ್ಲಿ ಭಾರತ ಸಾಧಿಸಿದ ಮೈಲಿಗಲ್ಲುಗಳನ್ನು ಸೆರೆಹಿಡಿಯುವ ಸಾಫ್ಟ್ವೇರ್ ಅನ್ನು ಗೂಗಲ್ ಅನಾವರಣಗೊಳಿಸಿದೆ.

ಈ ದೈತ್ಯ ಯೋಜನೆಗೆ ‘ಇಂಡಿಯಾ ಕಿ ಉಡಾನ್‘ ಎಂದು ಹೆಸರಿಸಲಾದ. ದೇಶದ ಕಥೆಯನ್ನು ಹೇಳಲು ಕಲಾತ್ಮಕ ಚಿತ್ರಣಗಳನ್ನು ಒಳಗೊಂಡಿದೆ.

ಗೂಗಲ್ ಆರ್ಟ್ಸ್ ಮತ್ತು ಕಲ್ಚರ್ ಮೂಲಕ ಕಾರ್ಯಗತಗೊಳಿಸಿದ ಯೋಜನೆಯು ದೇಶದ ಸಾಧನೆಗಳನ್ನು ಆಚರಿಸುತ್ತದೆ. ಕಳೆದ 75 ವರ್ಷಗಳಲ್ಲಿ ಭಾರತ ಸಾಧಿಸಿದ ಮೈಲಿಗಲ್ಲುಗಳನ್ನು ಈ ಸಾಫ್ಟ್ವೇರ್ ಆಧರಿಸಿದೆ. 

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ, ಸಂಸ್ಕೃತಿ ಸಚಿವಾಲಯ ಮತ್ತು ಗೂಗಲ್ನ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಈ ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು.

ರಾಷ್ಟ್ರವ್ಯಾಪಿ ಆಚರಣೆಗಳ ಭಾಗವಾಗಿ ಗೂಗಲ್, ಸಂಸ್ಕೃತಿ ಸಚಿವಾಲಯದೊಂದಿಗಿನ ತನ್ನ ಸಹಯೋಗವನ್ನು ಘೋಷಿಸಿತು. ಭಾರತೀಯರ ಕೊಡುಗೆಗಳನ್ನು ಮತ್ತು 1947 ರಿಂದ ಭಾರತದ ವಿಕಾಸವನ್ನು ಪ್ರದರ್ಶಿಸುವ ಮಾಹಿತಿಯುಕ್ತ ವಿಷಯವನ್ನು ಆನ್ಲೈನ್ ಮೂಲಕ ತಲುಪಲು ಕೇಂದ್ರೀಕರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ