ಎಂ.ವೈ. ಘೋರ್ಪಡೆ ಪುತ್ರ ಕಾರ್ತಿಕೇಯ ಹಾಗೂ ಗವಿಯಪ್ಪ ಬಿಜೆಪಿ ಸೇರ್ಪಡೆ

ಮಂಗಳವಾರ, 6 ಫೆಬ್ರವರಿ 2018 (06:55 IST)
ದೆಹಲಿ : ಬಳ್ಳಾರಿ ಜಿಲ್ಲೆಯ ಗಣಿ ಉದ್ಯಮಿ, ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಗವಿಯಪ್ಪ ಹಾಗೂ ಕಾರ್ತಿಕೇಯ ಘೋರ್ಪಡೆ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.


ದೆಹಲಿಯಲ್ಲಿ ಸಂಸದ ಶ್ರೀರಾಮುಲು ಅವರ ಜೊತೆ ಪಕ್ಷದ ಕಚೇರಿಗೆ ಆಗಮಿಸಿದ ಗವಿಯಪ್ಪ ಹಾಗೂ ಮಾಜಿ ಸಚಿವ ಎಂ.ವೈ. ಘೋರ್ಪಡೆ ಪುತ್ರರಾಗಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಾರ್ತಿಕೇಯ ಅವರು ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್, ಕೇಂದ್ರ ಸಚಿವ ಅನಂತ್ ಕುಮಾರ್, ಸಚಿವ ಸದಾನಂದ ಗೌಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪ್ರಕಾಶ ಜಾವೇಡ್ಕರ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು.


ಈ ವೇಳೆ ಮಾತನಾಡಿದ ಕಾರ್ತಿಕೇಯ ಘೋರ್ಪಡೆ, ಇತ್ತೀಚೆಗೆ ಕಾಂಗ್ರೆಸ್ ನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಬಳ್ಳಾರಿಯಲ್ಲಿ ಹಣದ ಬಲ ನಡೆಯುತ್ತಿದೆ. ಇದನ್ನು ಬದಲಾಯಿಸಲು ಬಿಜೆಪಿ ಸೇರಿದ್ದೇವೆ. ಮೋದಿ ಶಾ ಕಾರ್ಯವೈಖರಿಯನ್ನು ಮೆಚ್ಚಿ ಬಿಜೆಪಿಗೆ ಬಂದಿದ್ದೇವೆ. ಈ ಹಿಂದೆ ಬಳ್ಳಾರಿಯಲ್ಲಿ ಕಾಂಗ್ರೆಸಿಗೆ ಭದ್ರ ಬುನಾದಿ ನಿರ್ಮಿಸಿದ್ದೆವು. ಈ ಬಾರಿ ನಮ್ಮ ಬಲವನ್ನು ಫಲಿತಾಂಶದಲ್ಲಿ ಪ್ರದರ್ಶಿಸುತ್ತೇವೆ. ಬಳ್ಳಾರಿಯ 9 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ