ವಿಜಯ್ ಮಲ್ಯ ಹಸ್ತಾಂತರ ಕೋರಿ ಬ್ರಿಟನ್ನಿಗೆ ಮನವಿ ಸಲ್ಲಿಸಿದ ಭಾರತ ಸರ್ಕಾರ
ಗುರುವಾರ, 9 ಫೆಬ್ರವರಿ 2017 (20:26 IST)
ಕೋಟ್ಯಂತರ ರೂಪಾಯಿ ಸಾಲ ಮಾಡಿ ಲಂಡನ್ನಿನಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯ ಹಸ್ತಾಂತರಕ್ಕೆ ಕೋರಿ ಭಾರತ ಸರ್ಕಾರ, ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಭಾರತದ ವಿದೇಶಾಂಗ ಇಲಾಖೆ ಸಿಬಿಐ ಮೂಲಕ ನವದೆಹಲಿಯಲ್ಲಿರುವ ಬ್ರಿಟನ್ ಹೈಕಮೀಷನರ್`ಗೆ ಮನವಿ ಪತ್ರವನ್ನ ಹಸ್ತಾಂತರಿಸಿದೆ. ವಿಚಾರಣೆಗಾಗಿ ವಿಜಯ್ ಮಲ್ಯರನ್ನ ಭಾರತಕ್ಕೆ ಹಸ್ತಾಂತರಿಸುವಂತೆ ಕೋರಲಾಗಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ಕಿಂಗ್ ಫಿಶರ್ ಸಂಸ್ಥೆಗಾಗಿ 9000 ಕೋಟಿಯಷ್ಟು ಸಾಲ ಮಾಡಿದ್ದ ವಿಜಯ್ ಮಲ್ಯ, ಸಾಲ ಮರುಪಾವತಿಸದೆ ಸುಸ್ತಿದಾರನಾಗಿದ್ದಾನೆ. ಈ ಕುರಿತಂತೆ ಕೇಸುಗಳ ದಾಖಲಾಗುತ್ತಿದ್ದಂತೆ ಮಾರ್ಚ್ 2016ರಲ್ಲೇ ಬ್ರಿಟನ್`ಗೆ ತೆರಳಿದ್ದರು. ಹಲವು ನೋಟಿಸ್ ಹೊರತಾಗಿಯೂ ಮಲ್ಯ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿರಲಿಲ್ಲ.
`ಬ್ರಿಟನ್ ಸರ್ಕಾರದ ಜೊತೆ ನಾವು ಹಸ್ತಾಂತರ ಪ್ಪಂದ ಹೊಂದಿದ್ದೇವೆ. ವಿಜಯ್ ಮಲ್ಯ ವಿರುದ್ಧ ಕಾನೂನಾತ್ಮಕ ಪ್ರಕರವಿದೆ. ಉಳಿದದ್ದು ಬ್ರಿಟನ್ ಅಧಿಕಾರಿಗಳಿಗೆ ಬಿಟ್ಟ ವಿಚಾರ ಎಂದು ವಿಕಾಸ್ ಸ್ವರೂಪ್ ಹೇಳಿದ್ದಾರೆ.a