"ಸ್ವಚ್ ಭಾರತ್ ಮಿಷನ್ ಕುರಿತು ಸರಕಾರ ಚಿಂತನೆ ನಡೆಸುತ್ತಿದ್ದರೆ, ರಾಜಸ್ಥಾನದ ಆರೋಗ್ಯ ಸಚಿವರು ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವಾಗ ಸಿಕ್ಕಿಹಾಕಿಕೊಂಡಿದ್ದಾರೆ. ಸರ್ಕಾರಕ್ಕೆ ನಾಚಿಕೆಯಾಗಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು" ಎಂದು ಶರ್ಮಾ ಹೇಳಿದರು.
ಕಾಂಗ್ರೆಸ್‌ನ ರಾಜಸ್ಥಾನ್ ಘಟಕದ ಉಪಾಧ್ಯಕ್ಷರಾದ ಅರ್ಚನಾ ಶರ್ಮಾ ಅವರು ಈ ರೀತಿಯಾಗಿ ಹೇಳಿದರು, ಇಂತಹ ನಾಯಕರು "ಅವಮಾನಕರ" ಕಾರ್ಯಗಳನ್ನು ಮಾಡುವ ಮೂಲಕ ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ, ತನ್ನದೇ ಕ್ಷೇತ್ರದಲ್ಲಿ ಇಂತಹ ಘಟನೆ ಸಚಿವರಿಂದ ಸಂಭವಿಸಬಾರದಿತ್ತು. ಸರಾಫ್ ಅವರು ಈ ರೀತಿ ಮಾಡಿದ್ದು ಇದು ಮೊದಲ ಬಾರಿಗೆ ಅಲ್ಲ ಎಂದು ಅವರು ವಾದಿಸಿದರು. ಧೋಲ್‌ಪುರ್ ಉಪ ಚುನಾವಣೆಯ ಸಮಯದಲ್ಲಿ ಅವರು ಒಟ್ಟಿಗೆ ಹೋಗುತ್ತಿದ್ದಾಗ, ಸರಾಫ್ ಅವರು ದಾರಿಯಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು ಎಂದು ಅವರು ಹೇಳಿದರು.
ಸ್ವಚ್ ಭಾರತ್ ಅಭಿಯಾನದಲ್ಲಿ ನಗರವನ್ನು ಪಟ್ಟಿಯಲ್ಲಿ ಮೇಲಿನ ಸ್ಥಾನಕ್ಕೆ ತರಲು ಜೈಪುರ ಪುರಸಭೆಯು ಕಠಿಣ ಪರಿಶ್ರಮವನ್ನು ಪಡುತ್ತಿದೆ, ಇಂತಹ ಸಮಯದಲ್ಲಿ ಈ ಫೋಟೋ ಭಾರಿ ಅಪಹಾಸ್ಯಕ್ಕೆ ಎಡೆಮಾಡಿಕೊಟ್ಟಿದೆ. ಈ ನಗರದ ರಸ್ತೆಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ರೂ. 200 ದಂಡವನ್ನು ವಿಧಿಸಲಾಗುತ್ತದೆ.