ದೇಶದ ನಾಯಕರಾಗಲಿ ಅಥವಾ ಸೈನಿಕರಾಗಲಿ ಹುತಾತ್ಮರಾದಾಗ ಸಂಸತ್ತಿನಲ್ಲಿ ಪ್ರತಿ ಬಾರಿ ಶೋಕಾಚರಣೆ ನಡೆಸಿ ಗೌರವ ವಂದನೆ ಸಲ್ಲಿಸಲಾಗುತ್ತದೆ. ಆದರೆ, ಮೊದಲ ಬಾರಿ ನಾಗ್ರೋಟಾ ಸೇನಾ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹತರಾದ ಸೈನಿಕರಿಗೆ ಶೋಕ ಸಂತಾಪ ಸೂಚನೆಗೆ ಕೂಡಾ ಸಂಸತ್ತಿನಲ್ಲಿ ಆಸ್ಪದ ವಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವಿಪಕ್ಷಗಳು ಕಲಾಪವನ್ನು ಬಹಿಷ್ಕರಿಸಿವೆ.