ಲೋನ್ ಆಪ್ ಕಾಟ ತಡೆಯಲಾಗದೇ ಅಜ್ಜಿಯನ್ನೇ ಕೊಂದ ಮೊಮ್ಮಗಳು
24 ವರ್ಷದ ಆರೋಪಿ ಯುವತಿ ಲೋನ್ ಆಪ್ ಮೂಲಕ 9 ಸಾವಿರ ಸಾಲ ಮಾಡಿದ್ದಳು. ಇದೀಗ 15 ಸಾವಿರ ರೂ. ಮರುಪಾವತಿಸಬೇಕಾಗಿತ್ತು. ಆದರೆ ಆಕೆಗೆ ಸಾಧ‍್ಯವಾಗಿರಲಿಲ್ಲ. ಹೀಗಾಗಿ ಆಕೆಗೆ ಲೋನ್ ಆಪ್ ನಿಮ್ಮ ಫೋಟೋಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಡುವುದಾಗಿ ಬೆದರಿಕೆ ಹಾಕಿತ್ತು.
ಇದರಿಂದ ಭಯಗೊಂಡ ಯುವತಿ ತನ್ನ 70 ವರ್ಷದ ಅಜ್ಜಿಯನ್ನು ಕೊಂದು ಆಕೆಯ ಆಭರಣಗಳನ್ನು ಮಾರಿ ಸಾಲ ಪಾವತಿಸಿದ್ದಾಳೆ. ಪೊಲೀಸರು ತನಿಖೆ ನಡೆಸಿದಾಗ ನಿಜಾಂಶ ಬಯಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.