ಗರ್ಲ್ ಫ್ರೆಂಡ್ ಗೆ ಗಿಫ್ಟ್ ಕೊಡಲು ಎಟಿಎಂಗೆ ಕನ್ನ ಹಾಕಿದ ಪ್ರೇಮಿ

ಬುಧವಾರ, 14 ಸೆಪ್ಟಂಬರ್ 2022 (08:30 IST)
ಮುಂಬೈ: ಗರ್ಲ್ ಫ್ರೆಂಡ್ ಗೆ ದುಬಾರಿ ಉಡುಗೊರೆ ಕೊಡಬೇಕು, ಮೋಜಿನ ಜೀವನ ನಡೆಸಬೇಕೆಂಬ ದುರಾಸೆಗೆ ಬಿದ್ದ ಪ್ರೇಮಿ ಎಟಿಎಂಗೆ ಕನ್ನ ಹಾಕಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.

ಎಟಿಎಂಗೆ ಕನ್ನ ಹಾಕಲು ಯೂ ಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿ ಟ್ರೈನಿಂಗ್ ಪಡೆದುಕೊಂಡಿದ್ದ. ಬಳಿಕ ಅದಕ್ಕಾಗಿ ಸಲಕರಣೆಗಳನ್ನು ತಂದು ಕನ್ನ ಹಾಕಲು ವಿಫಲ ಯತ್ನ ನಡೆಸಿದ್ದ.

ಆದರೆ ಇದು ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ