ಮೊಮ್ಮಗಳ ಗುಪ್ತಾಂಗವನ್ನೆ ಸುಟ್ಟ ದುಷ್ಟ ಅಜ್ಜಿ

ಭಾನುವಾರ, 23 ಜುಲೈ 2017 (13:38 IST)
ಚಂಡೀಘಡ:ಕುಟುಂಬದಲ್ಲಿ ಗಂಡು ಮಕ್ಕಳಿಲ್ಲ ಎಂದು ದುಷ್ಟ ಅಜ್ಜಿಯೊಬ್ಬಳು 4 ವರ್ಷದ ಮೊಮ್ಮಗಳ ಗುಪ್ತಾಂಗವನ್ನೇ ಸುಟ್ಟಿರುವ ಅಮಾನುಷ ಘಟನೆ ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ನಡೆದಿದೆ.
 
ಇಲ್ಲಿನ ಡಿಂಗ್ ಪಟ್ಟಣದ ಮೊಜುಖೇರಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಅಜ್ಜಿಗೆ ಮೊಮ್ಮಗನ ಮೋಹ. ಆದರೆ ಕುಟುಂಬದಲ್ಲಿ ಸಾಲಾಗಿ ಮೂರು ಹೆಣ್ಣು ಮಕ್ಕಳೇ ಜನಿಸಿದ್ದರು. ಇದರಿಂದ ಹೊಟ್ಟೆ ಉರಿದುಕೊಂಡ ಅಜ್ಜಿ ತನ್ನ ಮುಂದೆ ಆಟವಾಡುತ್ತಿದ್ದ ಮೊಮ್ಮಗಳ ಗುಪ್ತಾಂಗಕ್ಕೆ ಇಕ್ಕುಳದಿಂದ ಬರೆ ಇಟ್ಟಿದ್ದಾಳೆ.  ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಈ ದುಷ್ಕೃತ್ಯವನ್ನು ಬಯಲಿಗೆಳೆದಿದ್ದು, ಸಧ್ಯ  ಬಾಲಕಿಯನ್ನು ಸಿರ್ಸಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀದಲಾಗುತ್ತಿದೆ.
 
ಮಕ್ಕಳ ರಕ್ಷಣಾ ಸಮಿತಿ ನೀಡಿದ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅರೋಪಿ ಅಜ್ಜಿಯನ್ನು ಬಂಧಿಸಿದ್ದಾರೆ. ಇನ್ನು ಸಂತ್ರಸ್ತ ಬಾಲಕಿ ತಂದೆ ಕೂಲಿ ಕೆಲಸ ಮಾಡುತ್ತಿದ್ದು,  ಬಾಲಕಿ ತಂದೆಗೂ ಸಮನ್ಸ್ ಜಾರಿ ಮಾಡಲಾಗಿದೆ.
 

ವೆಬ್ದುನಿಯಾವನ್ನು ಓದಿ