ತಮಿಳುನಾಡಿನಲ್ಲಿ ಈಗ ವಜಾಗೊಳಿಸುವ ಪರ್ವ!
ಚುನಾವಣಾ ಚಿಹ್ನೆಗಾಗಿ ದಿನಕರನ್ ಲಂಚದ ಅಮಿಷವೊಡ್ಡಿ ಸಿಕ್ಕಿ ಬೀಳುತ್ತಿದ್ದಂತೆ ಪಕ್ಷದ ಚಿತ್ರಣವೇ ಬದಲಾಯಿತು. ಇದಕ್ಕಾಗಿಯೇ ಕಾದಿದ್ದ ಪನೀರ್ ಸೆಲ್ವಂ ಬಣ ಮುಖ್ಯಮಂತ್ರಿ ಪಳನಿಸ್ವಾಮಿ ಜತೆ ಕೈ ಜೋಡಿಸಿದ್ದು, ಪಕ್ಷದ ನಾಯಕಿಯಾಗಿ ಮೆರೆಯುತ್ತಿದ್ದ ಶಶಿಕಲಾ ಮತ್ತು ಅವರ ಆಪ್ತ ಬೆಂಬಲಿಗರನ್ನು ಪಕ್ಷದಿಂದ ಹೊರ ಹಾಕಿದ್ದಾರೆ.