ಹೋಳಿ ಹಬ್ಬಕ್ಕೆ ಗಣ್ಯರಿಂದ ಶುಭಕೋರಿಕೆ

ಶುಕ್ರವಾರ, 18 ಮಾರ್ಚ್ 2022 (11:27 IST)
ನವದೆಹಲಿ : ಕೋವಿಡ್ ಇಳಿಮುಖವಾದ ನಂತರ ಇಡೀ ದೇಶವು ಸಂಭ್ರಮದಿಂದ ಹೋಳಿಹಬ್ಬ ಆಚರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ಸಿಂಗ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಹುಲ್ಗಾಂಧಿ ಸೇರಿದಂತೆ ಪ್ರಮುಖರು ಹಬ್ಬಕ್ಕೆ ಶುಭ ಕೋರಿದ್ದಾರೆ.
 
`ನಿಮ್ಮೆಲ್ಲರಿಗೂ ಪರಸ್ಪರ ಪ್ರೀತಿ ವಾತ್ಸಲ್ಯ ಹಾಗೂ ಸಹೋದರತ್ವ ಸಂಕೇತವಾಗಿರುವ ಹೋಳಿಹಬ್ಬದ ಶುಭಾಶಯಗಳು. ಈ ಬಣ್ಣದ ಹಬ್ಬದಲ್ಲಿ ಪ್ರತಿಯೊಂದು ಬಣ್ಣವೂ ನಿಮ್ಮ ಜೀವನದಲ್ಲಿ ಸಂತೋಷ, ಹರುಷ ತರಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ. 

ರಕ್ಷಣಾ ಸಚಿವ ರಾಜನಾಥ್ ಸಿಂಗ್, `ಇದು ಸಕಾರಾತ್ಮಕತೆ, ಚೈತನ್ಯ, ಸಂತೋಷ ಹಾಗೂ ಸಾಮರಸ್ಯಕ್ಕೆ ಸಂಬಂಧಿಸಿದ ಬಣ್ಣಗಳ ಹಬ್ಬವಾಗಿದೆ. ಎಲ್ಲರಿಗೂ ಹಬ್ಬದ ಶುಭಾಶಯಗಳು’ ಎಂದಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಸಹ ಹೋಳಿ ಹಬ್ಬದ ಸಂದೇಶ ಕೋರಿದ್ದು, `ಹೃದಯಗಳನ್ನು ಬೆಸೆಯುವ ಈ ಹೋಳಿಹಬ್ಬ ಪ್ರತಿಯೊಬ್ಬರಿಗೂ ಹರುಷ ತರಲಿ.

ಕೋವಿಡ್ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಇಳಿಕೆಯಾಗುತ್ತಿರುವುದು ಹರ್ಷದಾಯಕ. ಆದಾಗ್ಯೂ ಹಲವಾರು ದೇಶಗಳಲ್ಲಿ ಮತ್ತೆ ಅಲೆ ಮುಂದುವರಿಯುತ್ತಿದ್ದು ಎಚ್ಚರಿಕೆಯಿಂದಿರುವಂತೆ ಜನರಿಗೆ ಸೂಚಿಸಲಾಗುತ್ತಿದೆ’ ಎಂದೂ ಸಲಹೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ