ಕೌನ್ಸೆಲಿಂಗ್ ನೆಪದಲ್ಲಿ ಲೈಂಗಿಕ ಕಿರುಕುಳ: ಚರ್ಚ್ ಧರ್ಮಗುರು ಅರೆಸ್ಟ್
ಬಾಲಕಿ ಓದುವುದರಲ್ಲಿ ಹಿಂದಿದ್ದಳು. ಈ ಕಾರಣಕ್ಕೆ ಆಕೆಗೆ ಸಮಾಲೋಚನೆ ನಡೆಸುವಂತೆ ತಾಯಿಯೇ ಪಾದ್ರಿ ಬಳಿ ಕರೆದೊಯ್ದಿದ್ದಳು. ಆದರೆ ಇದನ್ನೇ ನೆಪ ಮಾಡಿಕೊಂಡು ಆಕೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಪಾದ್ರಿ ಆಕೆ ಮೇಲೆ ಬಲಾತ್ಕಾರ ಮಾಡಿದ್ದ.
ಈ ಬಗ್ಗೆ ಬಾಲಕಿ ತನ್ನ ಸ್ನೇಹಿತೆ ಬಳಿ ಅಳಲು ತೋಡಿಕೊಂಡಿದ್ದಳು. ಸ್ನೇಹಿತೆ ಈ ವಿಚಾರವನ್ನು ಶಾಲೆಯ ಶಿಕ್ಷಕಿಗೆ ತಿಳಿಸಿದ್ದಳು. ಅದರಂತೆ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪೋಸ್ಕೋ ಖಾಯಿದೆಯಡಿ ದೂರು ದಾಖಲಿಸಿಕೊಂಡಿದ್ದು ಪಾದ್ರಿಯನ್ನು ಬಂಧಿಸಿದ್ದಾರೆ.