ತಿರುಪತಿ: ಪ್ರಸಾದಂ ಮತ್ತು ಭಕ್ತರ ತಲೆಕೂದಲಿಗೆ ಜಿಎಸ್ ಟಿ ವಿನಾಯಿತಿ

ಮಂಗಳವಾರ, 20 ಜೂನ್ 2017 (15:16 IST)
ನವದೆಹಲಿ: ವಿಶ್ವ ವಿಖ್ಯಾತ ತಿರುಪತಿ ದೇವಸ್ಥಾನದ ಪ್ರಸಾದ ಮತ್ತು ಭಕ್ತರು ಮುಡಿ ರೂಪದಲ್ಲಿ ಒಪ್ಪಿಸಿದ ತಲೆ ಕೂದಲನ್ನು ತೆರಿಗೆಯಿಂದ ವಿನಾಯಿತಿಗೊಳಿಸಲು ಸರಕು ಮತ್ತು ಸೇವಾ ತೆರಿಗೆ ಮಂಡಳಿ(ಜಿಎಸ್‌ಟಿ) ಅನುಮತಿ ನೀಡಿದೆ. 
 
ಆಂಧ್ರ ಪ್ರದೇಶ ಸಚಿವ ವೈ ರಾಮಕೃಷ್ಣುಡು ದೆಹಲಿಯಲ್ಲಿ ನಡೆದಿದ್ದ 17ನೇ ಜಿಎಸ್‌ಟಿ ಮಂಡಲಿ ಸಭೆಯಲ್ಲಿ ಈ ಪ್ರಸ್ತಾವವನ್ನು ಮಂಡಿಸಿದ್ದರು. ಜಿಎಸ್‌ಟಿ ಮಂಡಳಿಯು ಅವರ ಪ್ರಸ್ತಾವವನ್ನು ಪರಿಗಣಿಸಿ ತಿರುಪತಿ ಪ್ರಸಾದ ಮತ್ತು ಭಕ್ತರು ಒಪ್ಪಿಸುವ ತಲೆ ಕೂದಲನ್ನು ತೆರಿಗೆಯಿಂದ ವಿನಾಯಿತಿಗೊಳಿದೆ.
 
ತಿರುಪತಿ ದೇವಳವನ್ನು ನಡೆಸುತ್ತಿರುವ ತಿರುಪತಿ ಟ್ರಸ್ಟ್‌ ಅತ್ಯಂತ ಘನವೆತ್ತ ಧಾರ್ಮಿಕ ಟ್ರಸ್ಟ್‌ ಆಗಿದ್ದು ದಿನಂಪ್ರತಿ ಲಕ್ಷಾಂತರ ಭಕ್ತರಿಗೆ ಅದು ಸೇವೆ ನೀಡುತ್ತಿದೆ ಎಂದು ಮಂಡಳಿಯ ಮುಂದೆ ಹೇಳಿಕೆ ನೀಡಲಾಗಿತ್ತು. ತಿರುಪತಿ ಪ್ರಸಾದ ಮತ್ತು ಭಕ್ತರ ತಲೆಕೂದಲಿಗೆ ತೆರಿಗೆ ವಿನಾಯಿತಿ ನೀಡಿರುವ ಸುಲಲಿತವಾಗಿ ವಹಿವಾಟು ನಡೆಸುವುದಕ್ಕೆ ಅನುಕೂಲ ಮಾಡಿಕೊಟ್ಟಿರುವುದಕ್ಕೆ ಜಿಎಸ್‌ಟಿ ಮಂಡಳಿಯ ಕ್ರಮವನ್ನು ಆಂಧ್ರ ಪ್ರದೇಶ ಸರಕಾರ ಸ್ವಾಗತಿಸಿದೆ.
 

ವೆಬ್ದುನಿಯಾವನ್ನು ಓದಿ