ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ: ಜಿಎಸ್ ಟಿಯ ಹೊಸ ಉತ್ಸಾಹದೊಂದಿಗೆ ಅಧಿವೇಶನ ನಡೆಯಲಿದೆ: ಪ್ರಧಾನಿ

ಸೋಮವಾರ, 17 ಜುಲೈ 2017 (13:02 IST)
ನವದೆಹಲಿ:ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದ್ದು, ಕಲಾಪ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಿಎಸ್‍ಟಿ ಪರಿಕಲ್ಪನೆಯಂತೆ ಹೊಸ ಹುರುಪಿನೊಂದಿಗೆ ಎಲ್ಲರೂ ಒಟ್ಟಾಗಿ ಸಾಗೋಣ. ಸರಕು ಮತ್ತು ಸೇವಾ ತೆರಿಗೆ ಯಶಸ್ವಿ ಜಾರಿಯು ಹೊಸ ಭರವಸೆ ಮತ್ತು ಉತ್ಸಾಹಗಳೊಂದಿಗೆ ಅಧಿವೇಶನವನ್ನು ತುಂಬಲಿದೆ ಎಂದು ತಿಳಿಸಿದ್ದಾರೆ.
 
ಜಿಎಸ್ ಟಿಯ ಪರಿಕಲ್ಪನೆ ಒಟ್ಟಿಗೆ ಬಲವಾಗಿ ಬೆಳೆಯುವುದಾಗಿದೆ (Growing Stronger Together). ಜಿಎಸ್ ಟಿ ಜಾರಿಯಿಂದ ಮುಂಗಾರು ಅಧಿವೇಶನ ಉತ್ಸಾಹದಿಂದ ತುಂಬಿರುತ್ತದೆ ಎಂದು ಭಾವಿಸುತ್ತೇನೆ. ಎಲ್ಲಾ ಪಕ್ಷಗಳು, ಸಂಸದರು ದೇಶದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಧಿವೇಶನ ಕಲಾಪದಲ್ಲಿ ಭಾಗವಹಿಸುವ ವಿಶ್ವಾಸವನ್ನು ಹೊಂದಿದ್ದೇನೆ ಎಂದು ಹೇಳಿದರು.
 
ಈ ಬಾರಿಯ ಅಧಿವೇಶನದ ಆರಂಭ ದಿನವೇ ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ಉಪ ರಾಷ್ಟ್ರಪತಿ ಚುನಾವಣೆ ಕೂಡ ಅಧಿವೇಶನ ಮುಕ್ತಾಯಕ್ಕೆ ಮುನ್ನ ನಡೆಯಲಿದೆ. ಆಗಸ್ಟ್ 9ಕ್ಕೆ ಕ್ವಿಟ್ ಇಂಡಿಯಾ ಚಳವಳಿ ನಡೆದು 75 ವರ್ಷ ತುಂಬಲಿದೆ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದರು.
 

ವೆಬ್ದುನಿಯಾವನ್ನು ಓದಿ