ಹತ್ಯೆ ಪ್ರಕರಣ: ಗುಜರಾತ್ ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ

ಶುಕ್ರವಾರ, 11 ಆಗಸ್ಟ್ 2017 (19:30 IST)
ಕಳೆದ 2004ರಲ್ಲಿ ಹತ್ಯೆಯಾದ ವ್ಯಕ್ತಿಯೊಬ್ಬನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌರಾಷ್ಟ್ರದ ಗೊಂಡಲ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಜೈರಾಜ್ ಸಿಂಗ್ ಜಡೇಜಾಗೆ ಗುಜರಾತ್ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
 
ನ್ಯಾಯಮೂರ್ತಿ ಅಕಿಲ್ ಕುರೇಶಿ ಮತ್ತು ಬಿ.ಎನ್. ಬೈರೆನ್ ವೈಷ್ಣವ್ ನೇತೃತ್ವದ ನ್ಯಾಯಪೀಠ,  ಜಡೇಜಾ ಮತ್ತು ಅವರ ಇಬ್ಬರು ಸಹವರ್ತಿಗಳು ಅಮರ್‌ಜಿತ್ ಸಿನ್ಹಾ ಜಡೇಜಾ ಮತ್ತು ಮಹೇನ್ರಾಸಿನ್ಹಾ ಅಲಿಯಾಸ್ ಭಗತ್ ರಾಣಾ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸೆಪ್ಟಂಬರ್ 30 ರೊಳಗೆ ಆರೋಪಿಗಳು ಪೊಲೀಸರಿಗೆ ಶರಣಾಗುವಂತೆ ಆದೇಶಿಸಿದ್ದಾರೆ.
 
ಕಳೆದ 1998 ರಲ್ಲಿ ಗೊಂಡಾಲ್ ವಿಧಾನಸಭಾ ಕ್ಷೇತ್ರದಿಂದ ಜಡೇಜಾ ಮೊದಲ ಬಾರಿಗೆ ಶಾಸಕರಾಗಿದ್ದರು. ನಂತರ 2002ರಲ್ಲಿ ಶಾಸಕರಾಗಿ ಮುಂದುವರೆದಿದ್ದರು. ಸುಪ್ರೀಂಕೋರ್ಟ್‌ನಿಂದ ನಿರಾಳತೆ ಪಡೆಯದಿದ್ದಲ್ಲಿ ಶಾಸಕ ಸ್ಥಾನವನ್ನು ಕೋರ್ಟ್ ರದ್ದುಗೊಳಿಸಬಹುದಾಗಿದೆ.
 
2004ರಲ್ಲಿ ಭೂ ವಿವಾದ ಕುರಿತಂತೆ ಬಿಜೆಪಿ ಶಾಸಕ ಜೈರಾಜ್ ಸಿಂಗ್, ವೀನು ಸಿಂಘಾಲಾ ಎಂಬಾತನನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದನು. ಆದರೆ, ಆರೋಪ ಸಾಬೀತಾಗದೆ ನಿರಪರಾಧಿಯಾಗಿ ಹೊರಬಂದಿದ್ದನು. ಆದರೆ ನಿಲೇಶ್ ಹತ್ಯೆಯಲ್ಲಿ ಜೈರಾಜ್ ಸಿಂಗ್ ಅಪರಾಧಿಯಾಗಿರುವುದು ಸಾಬೀತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ