ಗುಜರಾತ್: ನಿರ್ಮಾಣ ಸ್ಥಳದಲ್ಲಿ ಗೋಡೆ ಕುಸಿದು 9 ಮಂದಿ ದುರ್ಮರಣ

Sampriya

ಶನಿವಾರ, 12 ಅಕ್ಟೋಬರ್ 2024 (19:31 IST)
Photo Courtesy X
ಗುಜರಾತ್‌: ಇಲ್ಲಿನ ಮೆಹ್ಸಾನಾದಲ್ಲಿ ಖಾಸಗಿ ಸ್ಥಳದಲ್ಲಿ ನಿರ್ಮಾಣವಾಗುತ್ತಿದ್ದ ಗೋಡೆಕುಸಿದು ಒಂಭತ್ತು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಕಾಡಿ ತಾಲೂಕಿನ ಜಸಾಲ್‌ಪುರ ಗ್ರಾಮದ ಬಳಿ ಖಾಸಗಿ ನಿರ್ಮಾಣ ಸ್ಥಳದಲ್ಲಿ ಗೋಡೆ ಕುಸಿದು ಬಿದ್ದಿದೆ. ಈ ವೇಳೆ ಅಲ್ಲೇ ಇದ್ದ ಕಾರ್ಮಿಗಳು ಅವಶೇಷಗಳ ಒಳಗಡೆ ಸಿಲುಕಿಕೊಂಡಿದ್ದಾರೆ. ರಕ್ಷಣಾ ತಂಡಗಳು ಒಂಬತ್ತು ಶವಗಳನ್ನು ಹೊರತೆಗೆದಿವೆ ಎಂದು ಪಿಟಿಐ ವರದಿ ಮಾಡಿದೆ.

ಶನಿವಾರ ಮಧ್ಯಾಹ್ನ 1:45 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಮೆಹ್ಸಾನಾ ಡಿಡಿಒ ಕಚೇರಿ ಖಚಿತಪಡಿಸಿದೆ. ಗೋಡೆ ಕುಸಿದು ಮಣ್ಣು ಕುಸಿದು ಸುಮಾರು 9-10 ಕಾರ್ಮಿಕರು ಸಿಲುಕಿಕೊಂಡಿದ್ದಾರೆ.

ಮೆಹ್ಸಾನಾ ಜಿಲ್ಲಾ ಅಭಿವೃದ್ಧಿ ಅಧಿಕಾರಿ (ಡಿಡಿಒ) ಡಾ. ಹಸರತ್ ಜಾಸ್ಮಿನ್ ಮಾಹಿತಿ ನೀಡಿ, ಇದು ನಿರ್ಮಾಣ ಹಂತದಲ್ಲಿದ್ದ ಖಾಸಗಿ ಕಂಪನಿ. ಘಟನೆ ಮಧ್ಯಾಹ್ನ 1.45 ರ ಸುಮಾರಿಗೆ ನಡೆದಿದೆ. ನಮ್ಮ ಮಾಹಿತಿಯಂತೆ 9-10 ಜನರು ಸಿಕ್ಕಿಬಿದ್ದಿದ್ದಾರೆ, ಅದರಲ್ಲಿ 6 ಮಂದಿ 19 ವರ್ಷದ ಯುವಕನನ್ನು ಜೀವಂತವಾಗಿ ರಕ್ಷಿಸಲಾಗಿದೆ.

ಮೆಹ್ಸಾನಾ ಜಿಲ್ಲಾ ಕೇಂದ್ರದಿಂದ ಸುಮಾರು 37 ಕಿಮೀ ದೂರದಲ್ಲಿರುವ ಕಡಿ ಪಟ್ಟಣದ ಬಳಿ ಈ ಘಟನೆ ನಡೆದಿದೆ. ಜಸಲ್‌ಪುರ ಗ್ರಾಮದಲ್ಲಿ ಕಾರ್ಖಾನೆಯೊಂದಕ್ಕೆ ಭೂಗತ ಟ್ಯಾಂಕ್‌ಗಾಗಿ ಹಲವಾರು ಕಾರ್ಮಿಕರು ಹೊಂಡವನ್ನು ಅಗೆಯುತ್ತಿದ್ದಾಗ ಸಡಿಲವಾದ ಮಣ್ಣು ಕುಸಿದು ಅವರನ್ನು ಜೀವಂತವಾಗಿ ಹೂತುಹಾಕಿದೆ ಎಂದು ಕಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಹ್ಲಾದಸಿಂಹ ವಘೇಲಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ