ಇಬ್ಬರು ಐಎಸ್ಐ ಏಜೆಂಟ್ ಬಂಧನ

ಗುರುವಾರ, 13 ಅಕ್ಟೋಬರ್ 2016 (15:13 IST)
ಪಾಕ್ ಗುಪ್ತಚರ ಸಂಸ್ಥೆ ಐಎಸ್ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಶಂಕೆಯ ಮೇರೆಗೆ ಇಬ್ಬರನ್ನು ಗುಜರಾತ್ ಎಟಿಎಸ್ ಅಧಿಕಾರಿಗಳು ಬುಧವಾರ ಗಡಿ ಪ್ರದೇಶದಲ್ಲಿರುವ ಕಚ್‌ನಲ್ಲಿ ಬಂಧಿಸಿದ್ದಾರೆ. 
ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ಸುದ್ದಿಯ ಪ್ರಕಾರ ಆರೋಪಿಗಳನ್ನು ಮೊಹಮ್ಮದ್ ಅಲನ ಮತ್ತು ಸಫುರ್ ಸಮರಾ ಎಂದು ಗುರುತಿಸಲಾಗಿದೆ.
 
ಬಂಧಿತರಿಂದ ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಯ ಚಟುವಟಿಕೆ, ಚಲನವಲನಗಳನ್ನೊಂಳಗೊಂಡ ಹಲವು ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 
 
ಪಾಕ್ ಮಹಿಳೆಯೋರ್ವರು ಹನಿ ಟ್ರ್ಯಾಪ್ ಮೂಲಕ ಇವರಿಬ್ಬರನ್ನು ಬಲೆಗೆ ಕೆಡವಿಕೊಂಡಿದ್ದಳು ಎಂದು ತಿಳಿದು ಬಂದಿದೆ. 
 
ಖಾವ್ಡಾ ಗ್ರಾಮದ ನಿವಾಸಿಗಳಾದ ಈ ಇಬ್ಬರು ಐಎಸ್ಐ ಏಜೆಂಟ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ  ಮೇಲೆ ಎಟಿಎಸ್  ಅಧಿಕಾರಿಗಳು ಕಳೆದೊಂದು ವರ್ಷದಿಂದ ಇವರಿಬ್ಬರ ಮೇಲೆ ನಿಗಾ ಇಟ್ಟಿದ್ದರು. ಅವರಿಬ್ಬರ ಬಳಿಯಿಂದ ಪಾಕಿಸ್ತಾನ್ ಸಿಮ್ ಕಾರ್ಡ್‌ನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ